ಬದಿಯಡ್ಕ: ೧೭ರ ಹರೆಯದ ಬಾಲಕಿಗೆ ಮದುವೆಮಾಡಿಸಿದ ಘಟನೆ ಬೆಳಕಿಗೆ ಬಂದಿದ್ದು, ಇದರಂತೆ ಬಾಲ್ಯವಿವಾಹ ನಿಷೇಧ ಕಾನೂನು ಪ್ರಕಾರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಉನ್ನತಿಯೊಂದರಲ್ಲಿ ವಾಸಿಸುವ ಕುಟುಂಬದ ಸದಸ್ಯೆಯಾದ 17ರ ಹರೆಯದ ಬಾಲಕಿಯನ್ನು ಮಂಗಳೂರು ನಿವಾಸಿಯಾದ ಓರ್ವನಿಗೆ ಕೆಲವು ದಿನಗಳ ಹಿಂದೆ ಮದುವೆಮಾಡಿ ಕೊಡಲಾಗಿದೆ. ಈ ಬಗ್ಗೆ ಚೈಲ್ಡ್ ಡೆವಲಪ್ಮೆಂಟ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಬಾಲಕಿಯ ತಂದೆ, ತಾಯಿ ಹಾಗೂ ವರನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಬಾಲಕಿಯ ಹೆತ್ತವರ ಒತ್ತಾಯದ ಮೇರೆಗೆ ಗುಪ್ತವಾಗಿ ಮದುವೆ ನಡೆಸಲಾಗಿದೆಯೆಂದು ದೂರಲಾಗಿದೆ.






