ಕಾಸರಗೋಡು: ಅವಯವ ದಾನಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ನಡೆಸುವ ತಂಡದ ಇಬ್ಬರನ್ನು ಬಂಧಿಸಲಾಗಿದೆ. ವಂಚನೆ ತಂಡಕ್ಕೆ ನೇತೃತ್ವ ನೀಡುವ ಕಾಸರಗೋಡು ನಿವಾಸಿ ಹಾಗೂ ಆತನ ಪತ್ನಿಗಾಗಿ ಹುಡುಕಾಟ ನಡೆಯುತ್ತಿದೆ.
ಕೊಚ್ಚಿ ಕುನ್ನತ್ತುನಾಡು ನಿವಾ ಸಿಯೂ ಸನ್ ಕಮ್ಯುನಿಕೇಶನ್ಸ್ ಮಾಲಕ ಸಣ್ಣಿ ವರ್ಗೀಸ್, ಪತ್ನಿ ಸಿನಿ ವರ್ಗೀಸ್ ಎಂಬಿವರನ್ನು ಕುನ್ನತ್ತುನಾಡು ಪೊಲೀಸರು ಬಂಧಿಸಿದ್ದಾರೆ. ಇವರ ಸಂಸ್ಥೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಸಂಸದರು,ಶಾಸಕರು ಮೊದ ಲಾದವರ ಹಲವು ನಕಲಿ ಶಿಫಾರಸ್ಸು ಪತ್ರಗಳನ್ನು ಅಲ್ಲಿಂದ ಪತ್ತೆಹಚ್ಚಲಾಗಿದೆ. ಕಾಸರಗೋಡು ಜಿಲ್ಲೆಯ ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ನಜೀಬ್ ಎಂಬಾತ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾನೆ. ಈತನ ಪತ್ನಿಯೂ ಈ ವಂಚನೆ ಯಲ್ಲಿ ಶಾಮೀಲಾಗಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ದಂಪತಿ ಸೇರಿ ಅವಯವ ಅಗತ್ಯವುಳ್ಳವರನ್ನು ಬಲೆಗೆ ಬೀಳಿಸುತ್ತಿದ್ದಾರೆ. ವಂಚನೆಗೆ ಅಗತ್ಯವುಳ್ಳ ನಕಲಿ ದಾಖಲೆಗಳನ್ನು ನಿರ್ಮಿಸಿ ನೀಡುತ್ತಿದ್ದುದು ಸಣ್ಣಿ ವರ್ಗೀಸ್ ಹಾಗೂ ಪತ್ನಿ ಸಿನಿಯಾಗಿದ್ದಾರೆ. ಇವರ ಸಂಸ್ಥೆಯಿಂದ ಖಾಸಗಿ ಆಸ್ಪತ್ರೆಗಳ ಖಾಲಿ ಲೆಟರ್ ಪ್ಯಾಡ್, ನಕಲಿ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ತಯಾರಿಸಲಿರುವ ನಕಲಿ ದಾಖಲೆಗಳು, ಮೆಡಿಕಲ್ ಲ್ಯಾಬ್‌ಗಳ ನಕಲಿ ಲೆಟರ್ ಪ್ಯಾಡ್‌ಗಳು ಮೊದಲಾದವುಗಳನ್ನು ಪತ್ತೆಹಚ್ಚಲಾಗಿದೆ. ಸೆರೆಗೀಡಾದವರು ಹಾಗೂ ಮುಖ್ಯ ಆರೋಪಿಗಳ ಮಧ್ಯೆ ವಾಟ್ಸ,ಪ್‌ನಲ್ಲಿ ನಡೆದ ಸಂದೇಶಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಹೆಚ್ಚಿನ ತನಿಖೆಗಾಗಿ ಪೊಲೀಸರು ಕೂಡಲೇ ಕಾಸರಗೋಡಿಗೆ ತಲುಪಲಿದ್ದಾರೆಂಬ ಸೂಚನೆಯಿದೆ.







