ದುಬಾಯಿ ಸೆಕ್ಸ್ ರ‍್ಯಾಕೆಟ್ ದಂಧೆಗೆ ಕೇರಳದಿಂದ ಯುವತಿಯರನ್ನು ತಲುಪಿಸುತ್ತಿದ್ದ ಮುಖ್ಯ ಸೂತ್ರಧಾರ ಬಂಧನ

ಕೊಚ್ಚಿ: ಕೇರಳದಿಂದ ಯುವತಿ ಯರನ್ನು ಫ್ಯಾಶನ್ ಶೋ ಹೆಸರಲ್ಲಿ ದುಬಾಯಿಗೆ ತಲುಪಿಸಿ ಬಳಿಕ ಅವರನ್ನು ವೇಶ್ಯಾಟಿಕೆ ಜಾಲಕ್ಕೆ ಹಸ್ತಾಂತರಿಸುವ ತಂಡದ ಮುಖ್ಯ ಸೂತ್ರಧಾರನನ್ನು ಕೊಚ್ಚಿ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಎರ್ನಾಕುಳಂ ಕೇಂದ್ರೀಕರಿಸಿ  ಯುವತಿಯರನ್ನು  ದುಬಾಯಿಗೆ ಕರೆದೊಯ್ಯಲು ನೇತೃತ್ವ ನೀಡಿರುವ ಆಲಪ್ಪುಳ ಮಾವೇಲಿಕ್ಕರ ಚಾರುಮ್ಮೂಡ್ ನಿವಾಸಿ ಶ್ರೀಕುಮಾ ರ್ ಯಾನೆ ಬಿಲಾಲ್ (42) ಬಂಧಿತ ಆರೋಪಿಯಾಗಿದ್ದಾನೆ.

ಎರ್ನಾಕುಳಂ ಅಸಿಸ್ಟೆಂಟ್ ಸಿಟಿ ಪೊಲೀಸ್ ಕಮಿಶನರ್ ಕೆ.ಜಿ. ಸುರೇಶ್ ನೇತೃತ್ವದಲ್ಲಿ ನಿನ್ನೆ ಸಂಜೆ ಈತನನ್ನು ಬಂಧಿಸಲಾಗಿದೆ.  ದುಬಾಯಿಯಲ್ಲಿ ಸೆಕ್ಸ್ ರ‍್ಯಾಕೆಟ್‌ನಿಂದ ಪಾರಾಗಿ   ಕೊಚ್ಚಿಗೆ ತಲುಪಿ ಮರಡ್ ಪೊಲೀಸರಿಗೆ ದೂರು ನೀಡಿದ ಯುವತಿಯನ್ನು ವಿದೇಶಕ್ಕೆ ಕಳುಹಿಸಿರುವುದು ಶ್ರೀಕುಮಾರ್ ಆಗಿದ್ದಾನೆನ್ನಲಾಗಿದೆ. ಮುಂಬೈಯಿಂದ ಸೆರೆಗೀಡಾದ ಒಂದನೇ ಆರೋಪಿ ಸ್ಟೋಯಿಸಿ ಯಾನೆ ಸಿಂಧು (೫೬)ಳನ್ನು ನಿನ್ನೆ ರಾತ್ರಿ ಎರ್ನಾಕುಳಂಗೆ ತಲುಪಿಸಿ ನಡೆಸಿದ ತನಿಖೆಯಲ್ಲಿ ಶ್ರೀಕುಮಾರ್‌ನ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕೇರಳದ ವಿವಿಧ ಭಾಗಗಳಿಂದ ಯುವತಿಯರನ್ನು ತಮ್ಮ ಬಲೆಗೆ ಬೀಳಿಸಿ ಅವರನ್ನು ದುಬಾಯಿಗೆ ಕಳುಹಿಸುತ್ತಿದ್ದುದು ಶ್ರೀಕುಮಾರ್ ಆಗಿದ್ದಾನೆ. ಸಂತ್ರಸ್ತರಾದ ಯುವತಿಯ ರೊಂದಿಗೆ ಶ್ರೀಕುಮಾರ್ ಹಾಗೂ ಪತ್ನಿ ದುಬಾಯಿಗೆ ತೆರಳಿರುವುದಾಗಿಯೂ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ.  ಶ್ರೀಕುಮಾರ್‌ನನ್ನು ಇಂದು ನ್ಯಾಯಾ ಲಯದಲ್ಲಿ ಹಾಜರುಪಡಿ ಸಲಾಗುವುದು.  ಯುವತಿಯರನ್ನು ದುಬಾಯಿಯ ವೇಶ್ಯಾಟಿಕೆ ಜಾಲಕ್ಕೆ ಹಸ್ತಾಂತರಿಸಿದ ಪ್ರಕರಣದಲ್ಲಿ ಶ್ರೀಕುಮಾರ್ ಕೂಡಾ  ಸೆರೆಗೀಡಾಗುವುದರೊಂದಿಗೆ ಈ ದಂಧೆಗೆ ಸಂಬಂಧಿಸಿ ಸೆರೆಗೀಡಾದವರ ಸಂಖ್ಯೆ ನಾಲ್ಕಕ್ಕೇರಿದೆ. ಇದೇ ವೇಳೆ ಕೇರಳೀಯ ಯುವತಿಯರನ್ನು ದುಬಾಯಿಗೆ ಕಳುಹಿಸಿ ಸೆಕ್ಸ್ ರ‍್ಯಾಕೆಟ್‌ಗೆ ತಲುಪಿಸುವ  ದಂಧೆ ಆರಂಭಿಸಿ ನಾಲ್ಕು ವರ್ಷಗಳಾ ಯಿತೆಂದು ಮುಖ್ಯ ಆರೋಪಿ ಸಿಂಧು ಪೊಲೀಸ್ ತಂಡದ ಮುಂದೆ ಹೇಳಿಕೆ ನೀಡಿದ್ದಾಳೆ. ರಿಮಾಂಡ್‌ನಲ್ಲಿರುವ ಆರೋಪಿಗಳಾದ ಪೊನ್ನಾನಿ ನಿವಾಸಿ ಮಂಜಿಮ, ತಿರುವನಂತಪುರ ಪೊಂಙವಿಳ ನಿವಾಸಿ ಅಲೀನ ಎಂಬಿವರ ಹೊರತು  ಇನ್ನೂ ಹಲವು ಏಜೆಂಟ್‌ಗಳು ಸಿಂಧುವಿನ ಅಧೀನದ ಲ್ಲಿದ್ದಾರೆಂದು ತಿಳಿದುಬಂದಿದೆ. ಅವರನ್ನು ಕೂಡಾ  ಸೆರೆಹಿಡಿಯುವ ಪ್ರಯತ್ನದಲ್ಲಿ ತನಿಖಾ ತಂಡ ನಿರತವಾಗಿದೆ. ಇನ್ನು ಸೆರೆಗೀಡಾಗಲು ಬಾಕಿ ಇರುವವರಲ್ಲಿ ಶಮ್ಲ ಹಾಗೂ ರಮ್ಲತ್ ಪ್ರಸ್ತುತ ದುಬಾಯಿಯಲ್ಲಿದ್ದಾರೆ.

You cannot copy contents of this page