ಬದಿಯಡ್ಕ: ಕೆಡೆಂಜಿ ನಿವಾಸಿಯೂ, ಬದಿಯಡ್ಕ ಪೇಟೆಯಲ್ಲಿ ವ್ಯಾಪಾರಿಯಾಗಿರುವ ಮೋಹನ್ ನಾಯ್ಕ್ (65) ನಿಧನ ಹೊಂದಿದರು. ಇವರು ಬದಿಯಡ್ಕ ಪೇಟೆಯಲ್ಲಿ ರವಿಕಿರಣ್ ಫೂಟ್ ವೇರ್ ವ್ಯಾಪಾರ ಸಂಸ್ಥೆಯ ಮಾಲಕ ನಾಗಿದ್ದಾರೆ. ನಿನ್ನೆ ಬೆಳಿಗ್ಗೆ ಇವರಿಗೆ ಅಸೌಖ್ಯ ಕಾಣಿಸಿಕೊಂಡಿದ್ದು, ಇದರಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ೫ ಗಂಟೆಗೆ ನಿಧನ ಸಂಭವಿಸಿದೆ.
ಮೃತರು ಪತ್ನಿ ಪುಷ್ಪಾವತಿ, ಮಕ್ಕಳಾದ ಅಕ್ಷಯ, ರವಿಕಿರಣ್, ಅಳಿಯ ರತೀಶ್, ಸಹೋದರ ಗಂಗಾಧರ ನಾಯ್ಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






