ಮಿಲ್ಮಾ ಹಾಲಿನ ಬೆಲೆ ಲೀಟರ್‌ಗೆ 4 ರೂ. ಏರಿಕೆ

ತಿರುವನಂತಪುರ: ಮಿಲ್ಮಾ ಹಾಲಿನ ಬೆಲೆ ಪ್ರತೀ ಲೀಟರ್‌ಗೆ ತಲಾ 4ರೂ.ನಂತೆ  ಹೆಚ್ಚಿಸಲು ಮಿಲ್ಮಾದ ನಿರ್ದೇಶಕ ಮಂಡಳಿ ಸಭೆ ತೀರ್ಮಾನಿಸಿದೆ. ಈ ಹೆಚ್ಚಳ ಜೂನ್ ೧ರಿಂದ ಜ್ಯಾರಿಗೆ ಬರಲಿದೆ. ಇದಕ್ಕೆ ಹೊಂದಿಕೊಂಡು ಮಿಲ್ಮಾ ಇತರ ಉತ್ಪನ್ನಗಳ ಬೆಲೆಯೂ ಹೆಚ್ಚಾಗಲಿದೆ.

ಈ ತೀರ್ಮಾನದಂತೆ ಹೋಮೋ ಜೆನೈಸ್ಡ್  ಟೋನ್ಡ್ ಹಾಲಿನ ಅಧ ಲೀಟರ್‌ನ ಬೆಲೆ   28 ರೂ.ಗೇರಲಿದೆ. ಹೀಗೆ ಹೆಚ್ಚಿಸಲಾಗುವ 4 ರೂ.ನಲ್ಲಿ 3ರೂ 35 ಪೈಸೆ ಹೈನುಗಾರಿಕಾ ಕೃಷಿಕರಿಗೆ, 26 ಪೈಸೆ ಹೈನುಗಾರಿಕಾ ಸೊಸೈಟಿಗೆ ಹಾಗೂ ಬಾಕಿ ಹಣ ಮಿಲ್ಮಾ ಮಂಡಳಿಗೆ  ಲಭಿಸಲಿದೆ ಎಂದು  ಮಂಡಳಿ ಅಧ್ಯಕ್ಷ ಕೆ.ಎಸ್.ಮಣಿ ತಿಳಿಸಿದ್ದಾರೆ. ಈ ದರ ಏರಿಕೆಯಿಂದಾಗಿ ಹೈನುಗಾರಿಕಾ ಕೃಷಿಕರಿಗೆ ಇನ್ನು ಲೀಟರೊಂದಕ್ಕೆ 43.39 ರೂ. ನಂತೆ ಲಭಿಸಲಿದೆ.

You cannot copy contents of this page