ಕಣ್ಣೂರು: ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಲಿರುವ ವಿಜಿಲೆನ್ಸ್ನ ಪ್ರೊಜೆಕ್ಟ್ ಝೀರೋ ಯೋಜನೆಯಂಗವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 15 ಸಾವಿರ ರೂಪಾಯಿ ಲಂಚ ಪಡೆದ ಮಿನರಲ್ ರೆವೆನ್ಯೂ ಇನ್ಸ್ಪೆಕ್ಟರ್ನನ್ನು ಬಂಧಿಸಲಾಗಿದೆ. ಕಣ್ಣೂರು ಚೆರುಕುನ್ನು ನಿವಾಸಿಯೂ ಜಿಲ್ಲಾ ಮೈನಿಂಗ್ ಆಂಡ್ ಜಿಯೋಲಜಿ ಕಚೇರಿಯ ಮಿನರಲ್ ರೆವೆನ್ಯೂ ಆಫೀಸರ್ ಪಿ.ಪಿ.ಶ್ರೀಧರನ್ (49) ನನ್ನು ಕಣ್ಣೂರು ವಿಜಿಲೆನ್ಸ್ ಡಿವೈಎಸ್ಪಿ ಬಾಬು ಪೆರಿಂಙೋತ್ತ್ರ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಕಣ್ಣೂರು ಚೆರುಕುನ್ನು ನಿವಾಸಿಯಾದ ದೂರುಗಾರ ಹೊಯ್ಗೆಮಣ್ಣು ಸಂಗ್ರಹಿಸಿ ಮಾರಾಟ ನಡೆಸಲಿರುವ ಅನುಮತಿಗಾಗಿ ೨೦೨೫ ಜೂನ್ ತಿಂಗಳಲ್ಲಿ ಜಿಯೋಲಜಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅನುಮತಿ ನೀಡಲು ವಿಳಂಬ ವುಂಟಾದುದರಿಂದ ದೂರುಗಾರ ಹೈಕೋರ್ಟ್ ಸಮೀಪಿಸಿದ್ದು ಅನುಕೂಲ ತೀರ್ಪು ಅವರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಜಿಯೋಲಜಿ ಕಚೇರಿಯಿಂದ ದೂರುಗಾರನಿಗೆ ಸಂಬಂಧಪಟ್ಟ ದಾಖಲೆಗಳನ್ನು ಹಾಜರುಪಡಿಸಲು ತಿಳಿಸಲಾಗಿತ್ತು. ಇದರಂತೆ ದಾಖಲೆ ಗಳನ್ನು ಕಚೇರಿಯಲ್ಲಿ ಹಾಜರುಪಡಿಸ ಲಾಗಿತ್ತು.
ಈ ವೇಳೆ ಪರಿಶೀಲನೆ ನಡೆಸಲು ತಲುಪುವುದಾಗಿ ತಿಳಿಸಿ ದೂರುಗಾರನನ್ನು ಕಳುಹಿಸಲಾಯಿತು. ಆದರೆ ಒಂದು ವಾರ ಕಳೆದರೂ ಪರಿಶೀಲನೆಗೆ ತಲುಪದ ಹಿನ್ನೆಲೆಯಲ್ಲಿ ದೂರುಗಾರ ಮತ್ತೆ ಜಿಯೋಲಜಿ ಕಚೇರಿಗೆ ತಲುಪಿ ರೆವೆನ್ಯೂ ಇನ್ಸ್ಪೆಕ್ಟರ್ ಆದ ಶ್ರೀಧರ್ರನ್ನು ನೇರವಾಗಿ ಭೇಟಿಯಾಗಿದ್ದಾರೆ. ಸ್ಥಳ ಪರಿಶೀಲನೆ ನಡೆಸಬೇಕಾದರೆ ೩೦ ಸಾವಿರ ರೂಪಾಯಿ ನೀಡಬೇಕಾಗಿ ಕೇಳಿದ್ದಾರೆನ್ನಲಾಗಿದೆ. ಈ ವೇಳೆ ೧೫ ಸಾವಿರ ರೂ.ನೀಡಲು ದೂರುಗಾರ ಒಪ್ಪಿದ್ದರು. ಬಳಿಕ ಈ ವಿಷಯವನ್ನು ದೂರುಗಾರ ವಿಜಿಲೆನ್ಸ್ಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ನೇತೃತ್ವದಲ್ಲಿ ವಿಜಿಲೆನ್ಸ್ ಕಾರ್ಯಾಚರಣೆ ನಡೆಸಿ ಲಂಚ ಪಡೆದ ಅಧಿಕಾರಿಯನ್ನು ಬಂಧಿಸಿದೆ.







