ಅಕ್ರಮ ಹಣ ವರ್ಗಾವಣೆ ಪ್ರಕರಣ: ಮತ್ತೆ ಇ.ಡಿ ಮುಂದೆ ಹಾಜರಾದ ವೀಣಾ ವಿಜಯನ್

ಕೊಚ್ಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ವಿರೋಧಪಕ್ಷ ನಾಯಕ ಪಿಣರಾಯಿ ವಿಜಯನ್‌ರ ಪುತ್ರಿ ವೀಣಾ ವಿಜಯನ್ ಕೊಚ್ಚಿಯಲ್ಲಿರುವ ಎನ್‌ಫೋರ್ಸ್ ಮೆಂಟ್  ಡೈರೆಕ್ಟರೇಟ್ (ಇ.ಡಿ) ಕಚೇರಿ ಮುಂದೆ ಇಂದು ಮತ್ತೆ ಹಾಜರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ  ಜೂನ್ 29ರಂದು ಹಾಜರಾಗುವಂತೆ ವೀಣಾ ವಿಜಯನ್‌ರಿಗೆ ಇ.ಡಿ ಸಮನ್ಸ್ ಜ್ಯಾರಿಗೊಳಿಸಿತ್ತು. ಅದರ ಬದಲು ಅವರು ಇಂದು ಬೆಳಿಗ್ಗೆ 9.30ರ ವೇಳೆ ಹಾಜರಾಗಿದ್ದಾರೆ. ನಂತರ ಅವರಹೇಳಿಕೆ ದಾಖಲಿಸಿಕೊಳ್ಳುವ ಕ್ರಮದಲ್ಲಿ ಇ.ಡಿ ಅಧಿಕಾರಿಗಳು ತೊಡಗಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ ಹೊರಡಿಸಿದ  ಸಮನ್ಸ್‌ನಂತೆ ವೀಣಾ  ವಿಜಯನ್ ಈ ಹಿಂದೆಯೂ ಇ.ಡಿಯ ಮುಂದೆ ಹಾಜರಾಗಿದ್ದರು. ಅಂದು ಇ.ಡಿ ಕೇಳಿದ ಹಲವು ಪ್ರಶ್ನೆಗಳಿಗೆ ವೀಣಾ ವಿಜಯನ್ ಸರಿಯಾದ ರೀತಿಯ ಉತ್ತರ ನೀಡಿರಲಿಲ್ಲ. ಅದರಿಂದ ಜೂನ್ 29ರಂದು ಮತ್ತೆ ತಮ್ಮ ಕಚೇರಿಗೆ ಹಾಜರಾಗಬೇಕೆಂದು  ಎರಡನೇ ಬಾರಿ ಹೊಸ ಸಮನ್ಸ್ ಜ್ಯಾರಿಗೊಳಿಸಿತ್ತು. ಅದರ ಬದಲು ವೀಣಾ ಇಂದೇ ಇ.ಡಿ ಕಚೇರಿಗೆ ಹಾಜರಾಗಿದ್ದಾರೆ.

ವೀಣಾ ವಿಜಯನ್ ಮಾಲಕತ್ವದ ಲ್ಲಿರುವ ಎಕ್ಸಾಲೋಜಿಕ್ ಸೊಲ್ಯೂಶನ್ ಸಂಸ್ಥೆಗೆ ಕಲ್ಲಿದ್ದಲು ವ್ಯವಹಾರ ಸಂಸ್ಥೆ ಯಾದ ಸಿ.ಎಂ.ಆರ್.ಎಲ್ ಸಂಸ್ಥೆ ಅಕ್ರಮವಾಗಿ ಹಣ ವರ್ಗಾವಣೆ ನಡೆಸಲಾಗಿತ್ತೆಂಬ ಆರೋಪದಂತೆ ಆ ಬಗ್ಗೆ ಇ.ಡಿ ಪ್ರಕರಣ ದಾಖಲಿಸಿ ಕೊಂಡಿತ್ತು. ಅದಕ್ಕೆ ಸಂಬಂಧಿಸಿ ಇ.ಡಿ ಇಂದು ವೀಣಾವಿಜಯನ್‌ರನ್ನು ಎರಡನೇ ಬಾರಿಯಾಗಿ ವಿಚಾರಣೆ ಗೊಳಪಡಿಸಿದೆ. ಸಿಎಂಆರ್‌ಎಲ್ ಸಂಸ್ಥೆ ಮತ್ತು  ವೀಣಾ ವಿಜಯನ್‌ರ ಎಕ್ಸಾ ಲೋಜಿಕ್ ಸೊಲ್ಯೂಶನ್ ಸಂಸ್ಥೆ ನಡು ವಿನ ಆರ್ಥಿಕ ವ್ಯವಹಾರ ಬಗ್ಗೆ ಅಫೀಸ್ ಪ್ರೋಡ್ ಇನ್‌ವೆಸ್ಟಿಗೇಶನ್ ಅಫೇಸ್ (ಎಸ್‌ಎಫ್‌ಐಒ) ಈಗಾಗಲೇ ತನಿಖೆ ನಡೆಸಿ ಆ ವರದಿಯನ್ನು ಈಗಾಗಲೇ   ನ್ಯಾಯಾಲಯಕ್ಕೆ ಸಲ್ಲಿಸಿದೆ. ಬಳಿಕ ಇ.ಡಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಕೊಚ್ಚಿಯ ವಿಶೇಷ ಪಿ.ಎಂ ಎಲ್.ಎ ನ್ಯಾಯಾಲಯ ನೀಡಿದ ನಿರ್ದೇಶದಂತೆ ತನಿಖಾ ವರದಿಯ ಪ್ರತಿಯನ್ನು ಎಸ್‌ಎಫ್‌ಐಒ ಡೈರೆಕ್ಟರ್‌ಆಫ್ ಎನ್‌ಫೋರ್ಸ್ ಮೆಂಟ್‌ನ ತನಿಖಾ ವಿಭಾಗಕ್ಕೆ ಹಸ್ತಾಂತರಿಸಿದೆ. ಇದರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಅತೀ ನಿರ್ಣಾಯಕ ಮಾಹಿತಿ ಗಳು ಇ.ಡಿಗೆ ಲಭಿಸಿದ್ದು, ಅದರ ಆಧಾರದಲ್ಲಿ ಇ.ಡಿ ವೀಣಾ ವಿಜಯನ್‌ರ  ಇನ್ನಷ್ಟು  ಹೆಚ್ಚಿನ ಹೇಳಿಕೆಗಳನ್ನು ಇಂದು ದಾಖಲಿಸತೊಡಗಿದೆ.

You cannot copy contents of this page