ಪುತ್ತಿಗೆ: ಮುಹಿಮ್ಮಾತುಲ್ ಇಸ್ಲಾಮಿನ್ ಎಜ್ಯುಕೇಶನ್ ಸೆಂಟರ್ನ ವಾರ್ಷಿಕ ಕೌನ್ಸಿಲ್ ಸಮಾಪ್ತಿಗೊಂಡಿತು. ಕಲ್ಲಿಕೋಟೆ ಮರ್ಕ್ಸಿಲ್ ಅಧ್ಯಕ್ಷ ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದು, ಮರ್ಕ್ಸ್ ಡೈರೆಕ್ಟರ್ ಜನರಲ್ ಸಿ. ಮುಹಮ್ಮದ್ ಫೈಸಿ ಉದ್ಘಾಟಿಸಿದರು. ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ ಪ್ರಸ್ತಾಪಿಸಿದರು. ಹಸನುಲ್ ಅಹ್ದಲ್ ತಂಙಳ್ ಚರ್ಚೆಗಳಿಗೆ ನೇತೃತ್ವ ನೀಡಿದರು. ಮೂಸ ಸಖಾಫಿ ಕಳತ್ತೂರು ವರದಿ, ಉಮ್ಮರ್ ಸಖಾಫಿ ಕರ್ನೂರು ಆರ್ಥಿಕ ವರದಿ ಮಂಡಿಸಿದರು. ಹಲವಾರು ಗಣ್ಯರು ಮಾತನಾಡಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾಂತಾಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅಧ್ಯಕ್ಷರಾಗಿ, ಬಿ.ಎಸ್ ಅಬ್ದುಲ್ಲ ಕುಂಞಿ ಫೈಸಿ ಪ್ರಧಾನ ಕಾರ್ಯದರ್ಶಿಯಾಗಿ, ಹಾಜಿ ಅಮೀರಲಿ ಸೂರ್ಲು ಕೋಶಾ ಧಿಕಾರಿ ಯಾಗಿ ಆಯ್ಕೆಯಾದರು. ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರನ್ನು ಇದೇ ವೇಳೆ ಆಯ್ಕೆ ಮಾಡಲಾಯಿತು.







