ಕಾಸರಗೋಡು ಶ್ರೀ ಗಣೇಶೋತ್ಸವ ಗಣಪತಿ ವಿಗ್ರಹ ರಚನೆ ಮುಹೂರ್ತ

ಕಾಸರಗೋಡು: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ರಾಜಾಂಗಣ ದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ೭೧ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಗಣಪತಿ ವಿಗ್ರಹ ತಯಾರಿ ಮುಹೂರ್ತ ಉಳಿಯತ್ತಡ್ಕ ಬ್ರಹ್ಮಶ್ರೀ ಕೇಶವ ಆಚಾರ್ಯರ ನಿವಾಸದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ್ ವಿಟ್ಲ, ಅಧ್ಯಕ್ಷ ಸತೀಶ್ ಕಾಮತ್, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ಕೆ.ಆರ್, ಕೋಶಾಧಿಕಾರಿ ಉಪೇಂದ್ರ ಆಚಾರ್ಯ, ಗಣೇಶೋತ್ಸವ ಸಮಿತಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕಮಲಾಕ್ಷನ್ ಕೆ.ಎನ್, ಟ್ರಸ್ಟ್ ಖಜಾಂಚಿ ಸಂದೀಪ್ ಭಟ್, ಸಮಿತಿ ಸದಸ್ಯರಾದ ಕೆ.ಎನ್. ವೆಂಕಟ್ರಮಣ ಹೊಳ್ಳ, ಸೂರಜ್ ಅಣಂಗೂರು, ಲಕ್ಷ್ಮೀಕಾಂತ ನೆಲ್ಲಿಕುಂಜೆ, ಉಮೇಶ್ ನೆಲ್ಲಿಕುಂಜೆ, ಮೋಹನ್ ರಾಜ್ ಕೊರಕ್ಕೋಡು, ಸತ್ಯಸಾಯಿ ಎಸ್.ವಿ.ಟಿ, ಕುಸುಮಾಕರ ಕೊರಕ್ಕೋಡು, ಅಶೋಕ ಬಟ್ಟಂಪಾರೆ, ಮನೋಹರ ಶೆಟ್ಟಿ ಉಪಸ್ಥಿತರಿದ್ದರು.

RELATED NEWS

You cannot copy contents of this page