ಏಷ್ಯನ್ ಫೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್ ದ್ವಿತೀಯ ರೌಂಡ್ ಮೂಸಾ ಶರೀಫ್ ತಂಡಕ್ಕೆ ದ್ವಿತೀಯ ಸ್ಥಾನ

ಕಾಸರಗೋಡು: ಚೆನ್ನೈಯಲ್ಲಿ ನಡೆದ 49ನೇ ದಕ್ಷಿಣ ಭಾರತ ರ‍್ಯಾಲಿಯಲ್ಲಿ ಸ್ಪರ್ಧೆಗಿಳಿದಿರುವುದರೊಂದಿಗೆ 350ನೇ ರ‍್ಯಾಲಿ ಎಂಬ ಇತಿಹಾಸ ಸಾಧನೆಗೆ ಮೂಸಾ ಶರೀಫ್ ಕಾಲಿರಿಸಿದ್ದಾರೆ. ನಿನ್ನೆ ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್ ನಲ್ಲಿ ಆಯೋಜಿಸಿದ ಏಷ್ಯನ್ ಫೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ 2ನೇ ರೌಂಡ್ ಆಗಿರುವ ರ‍್ಯಾಲಿಯಲ್ಲಿ ಮೂಸಾ ಶರೀಫ್ ಹೈದರಾಬಾದ್‌ನ ಜೀತ್ ಜಬಕ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಏಷ್ಯನ್ ಫೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್‌ನ ೩ನೇ ಹಂತದ ಸ್ಪರ್ಧೆ ಆಗಸ್ಟ್ 7ರಿಂದ 9ರವರೆಗೆ ಇಂಡೋನೇಷ್ಯಾದಲ್ಲೂ, ಕೊನೆಯ ಸ್ಪರ್ಧೆ ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಚೈನಾದಲ್ಲೂ ನಡೆಯಲಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ 350ನೇ ರ‍್ಯಾಲಿಯಲ್ಲಿ ಭಾಗವಹಿಸಿದ ಅಪೂರ್ವ ಸಾಧನೆ ಮಾಡಿದ ಮೂಸಾ ಶರೀಫ್‌ನನ್ನು ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಗೌರವಿಸಿದೆ.

RELATED NEWS

You cannot copy contents of this page