ಕಾಸರಗೋಡು: ಜಿಲ್ಲೆಯ ಎಲ್ಲಾ ಎಂಡೋಸಲ್ಫಾನ್ ಸಂತ್ರಸ್ತರು ಬಿಪಿಎಲ್ ಯಾದಿಯಲ್ಲಿ ಒಳಗೊಂಡಿದ್ದಾರೆ ಎಂಬುದನ್ನು ಖಚಿತಪಡಿಸಬೇಕೆಂದು ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ನಿರ್ದೇಶಿಸಿದರು. ಜಿಲ್ಲೆಯಲ್ಲಿ ಪಾರದರ್ಶಕವಾದ, ಸಬಲವಾದ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಕೂಡಾ ಖಚಿತಪಡಿಸಬೇಕೆಂದು ಜಿಲ್ಲಾಧಿಕಾರಿ ನುಡಿದರು. ಆಹಾರ ಭದ್ರತಾ ಜಿಲ್ಲಾ ಮಟ್ಟದ ವಿಜಿಲೆನ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪೆಟ್ರೋಲ್‌ನಲ್ಲಿ ಅನುಮತಿ ನೀಡಿದ 2೦ ಶೇಕಡಾಕ್ಕಿಂತಲೂ ಹೆಚ್ಚು ಎಥೆನಾಲ್ ಒಳಗೊಂಡಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಪೆಟ್ರೋಲ್ ಬಂಕ್‌ಗಳಲ್ಲಿ ತಪಾಸಣೆ ನಡೆಸಿ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ. ಇದರ ಫಲಿತಾಂಶ ಇದುವರೆಗೆ ಲಭಿಸಲಿಲ್ಲವೆಂದು ಸಭೆಯಲ್ಲಿ ತಿಳಿಸಲಾಯಿತು. ಕೊಲ್ಲಿ ದೇಶಗಳ ಯುದ್ದ ಸನ್ನಿವೇಶದಲ್ಲಿ ಅಡುಗೆ ಅನಿಲ ಲಭ್ಯತೆ ಸಮಸ್ಯೆ ಎದುರಿಸಿದಾಗ ಜಿಲ್ಲೆ, ತಾಲೂಕು ಮಟ್ಟಗಳಲ್ಲಿ 24ಗಂಟೆಯೂ ಕಾರ್ಯಾಚರಿಸುವ ವಾರ್ ರೂಂಗಳನ್ನು ಆರಂಭಿಸಿ ಹೋಟೆಲ್‌ಗಳಿಗೆ ಅಗತ್ಯದ ಗ್ಯಾಸ್ ಸಿಲಿಂಡರ್‌ಗಳ ಲಭ್ಯತೆ ಖಚಿತಪಡಿಸಲಾಯಿತು. ಸಾರ್ವಜನಿಕ ಮಾರುಕಟ್ಟೆಯ ಬೆಲೆಯೇರಿಕೆಯನ್ನು ತಡೆಯಲು ಸೂಕ್ತವಾದ ಮಧ್ಯಂತರಗಳಲ್ಲಿ ತಪಾಸಣೆ ನಡೆಸುವುದರ ಜೊತೆಗೆ ಓಣಂ ಹಬ್ಬದ ಕಾಲದಲ್ಲಿ ನಿತ್ಯೋಪಯೋಗ ಸಾಮಗ್ರಿಗಳ ಬೆಲೆಯೇರಿಕೆ, ಕಾಳಸಂತೆ, ಸಂಗ್ರಹಿಸಿಡುವುದನ್ನು ಪತ್ತೆಹಚ್ಚುವುದಕ್ಕಾಗಿ ಸಾರ್ವಜನಿಕ ವಿತರಣಾ ಇಲಾಖೆ, ಲೀಗಲ್ ಮೆಟ್ರೋಲಜಿ, ಪೊಲೀಸ್, ಕಂದಾಯ, ಆಹಾರ ಭದ್ರತಾ ಇಲಾಖೆ ಎಂಬಿವುಗಳ ಅಧಿಕಾರಿಗಳನ್ನು ಸೇರಿಸಿಕೊಂಡು ಸಂಯುಕ್ತ ಸ್ಕ್ವಾಡ್ ರೂಪೀಕರಿಸಿ ಮಾರುಕಟ್ಟೆಗಳಲ್ಲಿ ತಪಾಸಣೆ ನಡೆಸಲಾಗಿದೆ. ಅಪರಿಮಿತ ಬೆಲೆ ವಸೂಲು ಮಾಡುವುದಕ್ಕೆ ಸಂಬಂಧಿಸಿ ಇಲಾಖಾ ಮಟ್ಟದಲ್ಲಿ ಇತರ ಇಲಾಖೆಗಳೊಂದಿಗೆ ಸೇರಿಕೊಂಡು ಜಿಲ್ಲೆಯ ಐದು ಮಲ್ಟಿ ಫ್ಲೆಕ್ಸ್ ಥಿಯೇಟರ್‌ಗಳಲ್ಲೂ, ಆರು ಮಾಲ್‌ಗಳಲ್ಲಿ ತಪಾಸಣೆ ನಡೆಸಲಾಗಿದೆ. ರೇಶನ್ ಅಂಗಡಿಗಳ ಚಟುವಟಿಕೆ ಉತ್ತಮ ಪಡಿಸುವುದಕ್ಕೆ, ಅವ್ಯವಹಾರ ಇಲ್ಲದಂತೆ ಮಾಡುವುದಕ್ಕೆ ರೇಶನಿಂಗ್ ಇನ್ಸ್‌ಪೆಕ್ಟರ್, ತಾಲೂಕು ಸಪ್ಲೈ ಆಫೀಸರ್ ಹೊರತಾಗಿ ಜಿಲ್ಲಾ ಸಪ್ಲೈ ಆಫೀಸರ್‌ಗಳು ಪ್ರತೀ ತಿಂಗಳು ನೇರವಾಗಿ ತಪಾಸಣೆ ನಡೆಸುತ್ತಿದ್ದಾರೆ.
ದೂರದ ಸ್ಥಳಗಳ ಬುಡಕಟ್ಟು ಪಂಗಡದ ಕೇರಿಗಳಲ್ಲಿ, ಪ್ರಯಾಣ ಸೌಕರ್ಯ ಸೀಮಿತಗೊಂಡ ಕುಟುಂಬಗಳಿಗೆ ಅವರು ವಾಸಿಸುವ ಮನೆಗಳಿಗೆ ನೇರವಾಗಿ ರೇಶನ್ ತಲುಪಿಸುವ ಯೋಜನೆ ಬಳಾಲ್ ಪಂಚಾಯತ್‌ನಲ್ಲಿ ಆರಂಭಗೊಂಡಿದೆ. ಜಿಲ್ಲಾ ಸಪ್ಲೈ ಆಫೀಸರ್ ಕೆ.ಎನ್. ಬಿಂದು, ರಾಜ್ಯ ಆಹಾರ ಆಯೋಗದ ಸದಸ್ಯ ವಿ. ರಮೇಶನ್, ಜಿಲ್ಲಾ ಸಪ್ಲೈ ಆಫೀಸ್ ಸೀನಿಯರ್ ಸುಪರಿಂಟೆಂ ಡೆಂಟ್ ವಿ. ಜಯ ಮೋನ್, ಕ್ಲರ್ಕ್ ಕೆ.ವಿ. ನಿಖಿಲ್‌ಲಾಲ್ ಮಾತನಾಡಿದರು.







