ತಿರುವನಂತಪುರ: ರಾಜ್ಯ ಎದು ರಿಸುತ್ತಿರುವ ತೀವ್ರ ವಿದ್ಯುತ್ ಸಮಸ್ಯೆಗೆ ಸದ್ಯ ಪರಿಹಾರ ಉಂಟಾಗದು. ಇದರಿಂ ದಾಗಿ ರಾಜ್ಯದಲ್ಲಿ ಕಠಿಣ ವಿದ್ಯುತ್ ನಿಯಂತ್ರಣ ಏರ್ಪಡಿಸಲಾಗಿದೆ. ಸದ್ಯ ಹೊರಗಿನಿಂದ ಅಗತ್ಯದಷ್ಟು ವಿದ್ಯುತ್ ಖರೀದಿಸಲು ಯಾವುದೇ ಸಾಧ್ಯತೆಗಳು ಇಲ್ಲವಾಗಿದ್ದು, ಇದರಿಂದಾಗಿ ಈ ತಿಂಗಳು ಪೂರ್ಣವಾಗಿ ರಾಜ್ಯ ಕತ್ತಲಲ್ಲೇ ಕಳೆಯಬೇಕಾಗಿ ಬರಲಿದೆ. ಇಂತಹ ನಿಯಂತ್ರಣ ಈ ತಿಂಗಳ 30ರ ತನಕ ಮುಂದುವರಿಯಲಿದೆ ಎಂದು ಸ್ವತಃ ವಿದ್ಯುತ್ ಖಾತೆ ಸಚಿವ ಸನ್ನಿ ಜೋಸೆಫ್ ಹೇಳಿದ್ದಾರೆ. ಈ ಕುರಿತಾದ ಅಧಿಕೃತ ಘೋಷಣೆಯನ್ನು ರಾಜ್ಯ ವಿದ್ಯುನ್ಮಂಡಳಿ ಇಂದು ಹೊರಡಿಸಲಿದೆ.
ರಾಜ್ಯ ಎದುರಿಸುತ್ತಿರುವ ತೀವ್ರ ವಿದ್ಯುತ್ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ವಿದ್ಯುತ್ ಖಾತೆ ಸಚಿವರು ನಿನ್ನೆ ವಿದ್ಯುನ್ಮಂಡಳಿಯ ಅಧ್ಯಕ್ಷರೂ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ತುರ್ತು ಸಭೆ ಕರೆದು ಸಮಾಲೋಚನೆ ನಡೆಸಿದ್ದರು. ಆದರೆ ಅದರಲ್ಲಿ ಯಾವುದೇ ಪರಿಹಾರ ಮಾರ್ಗ ಉಂಟಾಗಿಲ್ಲ.
ವಿದ್ಯುತ್ ಪೂರೈಕೆ ಪದೇ ಪದೇ ಮೊಟಕುಗೊಳ್ಳುತ್ತಿರುವುದರಿಂದಾಗಿ ಜನರು ತೀವ್ರ ಸಂಕಷ್ಟ ಎದುರಿಸಬೇಕಾಗಿ ಬಂದಿರುವುದಕ್ಕೆ ಸಚಿವರು ಇದೇ ಸಂದರ್ಭದಲ್ಲಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ವಿದ್ಯುತ್ ನಿಯಂತ್ರಣದೊಂದಿಗೆ ಜನರು ಸಹಕರಿಸಬೇಕೆಂದೂ ಸಚಿವರು ವಿನಂತಿಸಿಕೊಂಡಿದ್ದಾರೆ.
ಈ ತಿಂಗಳ ಕೊನೆಯ ವಾರ ದೊಳಗಾಗಿ ವಿದ್ಯುತ್ ಲಭ್ಯತೆಯನ್ನು ಇನ್ನಷ್ಟು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗು ವುದು. ಈ ಅವಧಿಯಲ್ಲಿ ಹೊರಗಿನಿಂದ ೩೦೦ ಮೆಘಾವ್ಯಾಟ್‌ನಷ್ಟು ಹೆಚ್ಚುವರಿ ವಿದ್ಯುತ್ ಖರೀದಿಸುವ ಒಡಂ ಬಡಿಕೆಗೂ ಸಹಿ ಹಾಕಲಾಗುವುದು. ಅದರಂತೆ ವಿದ್ಯುತ್ ಲಭ್ಯ ಆರಂಭ ಗೊಳ್ಳುವ ವೇಳೆ ವಿದ್ಯುತ್ ನಿಯಂ ತ್ರಣಕ್ಕೆ ಅಲ್ಪ ಪ್ರಮಾಣದ ಶಮನ ಉಂ ಟಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಮುಂಗಾರು ಮಳೆ ಸುರಿ ಯುವಿಕೆಯಲ್ಲಿ ಉಂಟಾಗಿರುವ ಬಾರಿ ಕುಸಿತ, ಅದು ರಾಜ್ಯದ ಜಲ ವಿದ್ಯುತ್ ಉತ್ಪಾದನಾ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿದಿರುವುದರ ಪರಿಣಾಮ ವಿದ್ಯುತ್ ಉತ್ಪಾದನೆಯಲ್ಲಿ ಉಂಟಾಗಿರುವ ಕುಸಿತ, ಹೊರ ರಾಜ್ಯಗಳಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂ ದಾಗಿ ಅಲ್ಲಿಂದ ಕೇರಳಕ್ಕೆ ಅಗತ್ಯದಷ್ಟು ವಿದ್ಯುತ್ ಪೂರೈಸಲು ಸಾಧ್ಯವಾಗದೇ ಇರುವಿಕೆ ಹಾಗೂ ಮಳೆ ಕುಸಿತದಿಂದ ತಾಪಮಾನ ಮಟ್ಟ ಹೆಚ್ಚಾಗಿ ಅದು ವಿದ್ಯುತ್ ಬಳಕೆಯನ್ನು ಹೆಚ್ಚಿಸುವಂತೆ ಮಾಡಿರುವುದೇ ರಾಜ್ಯ ಇಂದು ತೀವ್ರ ವಿದ್ಯುತ್ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವುದರ ಪ್ರಧಾನ ಕಾರಣವಾಗಿದೆ. ಆದ್ದರಿಂದ ಜನರು ವಿದ್ಯುತ್ ಉಪಯೋಗವನ್ನು ಗರಿಷ್ಠ ಪ್ರಮಾಣದಲ್ಲಿ ಇಳಿಸಬೇಕೆಂದು ಇದೇ ಸಂದರ್ಭದಲ್ಲಿ ರಾಜ್ಯ ವಿದ್ಯುನ್ಮಂಡಳಿ ಜನರಲ್ಲಿ ವಿನಂತಿಸಿಕೊಂಡಿದೆ.







