ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲಪೂರ್ವ ಶುಚೀಕರಣಕ್ಕೆ ಚಾಲನೆ

ಉಪ್ಪಳ: ಮಳೆಗಾಲಪೂರ್ವ ಶುಚೀಕರಣ ಕಾರ್ಯಗಳಿಗೆ ಮಂಗಲ್ಪಾಡಿ ಪಂಚಾಯತ್ ಆಡಳಿತ ಸಮಿತಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಉಪ್ಪಳಗೇಟ್ ಪರಿಸರದಲ್ಲಿ ಶುಚೀಕರಣ ಆರಂಭಿಸಲಾಗಿದೆ. ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ಉದ್ಘಾಟಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಪಂಚಾಯತ್ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಹಸಿರು ಕ್ರಿಯಾಸೇನೆ ಸದಸ್ಯೆಯರು ಸಹಕಾರ ನೀಡಿದರು. ಇದೇ ರೀತಿ ೨೪ ವಾರ್ಡ್‌ಗಳಲ್ಲೂ ಶುಚೀಕರಣ ನಡೆಯಲಿದೆ.

ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಉಪೇಕ್ಷಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.

You cannot copy contents of this page