ಚಿನ್ನದ ಬೆಲೆ ಇಂದು  ಪವನ್‌ಗೆ  ಹೆಚ್ಚಿದ್ದು 3680 ರೂ.

ಕಾಸರಗೋಡು: ರಾಜ್ಯದಲ್ಲಿ  ಚಿನ್ನದ ಬೆಲೆಯಲ್ಲಿ ಇಂದು ಕೂಡಾ ಭಾರೀ ಹೆಚ್ಚಳ ಉಂಟಾಗಿದೆ. 22 ಕ್ಯಾರೆಟ್ ಚಿನ್ನಕ್ಕೆ ಇಂದು ಗ್ರಾಂಗೆ 460 ರೂಪಾಯಿಗಳ ಹೆಚ್ಚಳ ಉಂಟಾಗಿದೆ. ಇದರೊಂದಿಗೆ  1 ಗ್ರಾಂ ಚಿನ್ನಕ್ಕೆ 14,190 ರೂಪಾಯಿ ಹಾಗೂ 1  ಪವನ್‌ಗೆ 1,13,520 ರೂ.ಗೇರಿದೆ. ಅಂತಾರಾಷ್ಟ್ರೀಯ ಘರ್ಷಣೆ ಹೆಚ್ಚುತ್ತಿರುವುದರಿಂದ  ಚಿನ್ನದ ಬೆಲೆಯಲ್ಲಿ ಇನ್ನೂ ಹೆಚ್ಚಳವಾಗುವ ಸೂಚನೆಯಿದೆ ಯೆಂದು ಹೇಳಲಾಗುತ್ತಿದೆ.  ನಿನ್ನೆಯೂ ಚಿನ್ನದ ಬೆಲೆಯಲ್ಲಿ 3160 ರೂ. ಹೆಚ್ಚಳವಾಗಿ ಪವನ್‌ಗೆ 1,10,400 ರೂ. ಆಗಿತ್ತು.  ನಿನ್ನೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಎರಡುಬಾರಿಯಾಗಿ ಬೆಲೆ ಹೆಚ್ಚಳವಾಗಿದೆ.

RELATED NEWS

You cannot copy contents of this page