ಪ್ರಧಾನಿ ನರೇಂದ್ರಮೋದಿ ಮಹಿಳೆಯರ ಸುರಕ್ಷತೆ, ಗೌರವ  ಖಚಿತಪಡಿಸಿದ  ಆಡಳಿತಗಾರ-ಶೋಭಾ ಸುರೇಂದ್ರನ್

ಹೊಸದುರ್ಗ: ಸ್ವಚ್ಛ ಭಾರತ್ ಯೋಜನೆಯ ಮೂಲಕ ಕೋಟ್ಯಂತರ ಶೌಚಾಲಯಗಳನ್ನು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ  ಮನೆಗಳನ್ನು ನಿರ್ಮಿಸಿಕೊಟ್ಟು  ಮಹಿಳೆಯರ ಸುರಕ್ಷತೆ ಮತ್ತು ಗೌರವವನ್ನು ಖಚಿತಪಡಿಸಿದ ಆಡಳಿತಗಾರನಾಗಿ ದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಹೇಳಿದರು.  ಬಿಜೆಪಿ ಮಹಿಳಾ ಮೋರ್ಛಾ ಜಿಲ್ಲಾ ಸಮಿತಿ ಮತ್ತು ವೆಳ್ಳರಿಕುಂಡ್ ಮಂಡಲ ಸಮಿತಿಯ ಜಂಟಿ ಆಶ್ರಯದಲ್ಲಿ ಹಸಿರು ಕ್ರಿಯಾ ಸೇನೆ ಸದಸ್ಯೆಯರನ್ನು ಹಾಗೂ  ಬಿಜೆಪಿಯ ಹಿರಿಯ ನಾಯಕರನ್ನು ಸನ್ಮಾನಿಸಲು ಆಯೋ ಜಿಸಿದ್ದ  ‘ಸ್ನೇಹಾದರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹೆಣ್ಣುಮಕ್ಕಳು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ನರೇಂದ್ರಮೋದಿ ಸರಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಇದರಿಂದ ಕುಟುಂಬಗಳಲ್ಲಿ ಲಿಂಗತಾರತಮ್ಯ ಕಡಿಮೆಯಾಗಲು ಹಾಗೂ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ದೊರಕಲು ನೆರವಾಗಿದೆ ಎಂದೂ ಶೋಭಾ ಸುರೇಂದ್ರನ್ ತಿಳಿಸಿದರು. 

ಮಹಿಳಾ ಮೋರ್ಛಾ  ಜಿಲ್ಲಾಧ್ಯಕ್ಷೆ ಕೆ.ಎಸ್. ರಮಣಿ ಅಧ್ಯಕ್ಷತೆ ವಹಿಸಿದರು.  ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಕಾರ್ಯದರ್ಶಿ ಎನ್.ಮಧು, ಎಸ್‌ಟಿ ಮೋರ್ಛಾ ರಾಜ್ಯ ಉಪಾಧ್ಯಕ್ಷ ಶಿಬು ಪಾಣತ್ತೂರು, ಮಂಡಲ ಅಧ್ಯಕ್ಷ ವಿನೀತ್ ಮುಂಡಮಾಣಿ, ಮಹಿಳಾ ಮೋರ್ಛಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಪ್ರೇಮಲತಾ, ಅನಿತಾ ನಾಯಕ್, ಜಿಲ್ಲಾ  ಕಾರ್ಯದರ್ಶಿಗಳಾದ ಅನುಶ್ರೀ, ಮಮತಾ ಸಾಗರ್, ವೆಳ್ಳರಿಕುಂಡ್ ಮಂಡಲ ಅಧ್ಯಕ್ಷೆ ಆಶಾ, ಬಿಜೆಪಿ ಬಳಾಲ್ ಪಂ. ಸಮಿತಿ ಅಧ್ಯಕ್ಷ ಸಾಜನ್ ತುಂಗ, ಬಳಾಲ್ ಪಂ. ಹಸಿರು ಕ್ರಿಯಾಸೇನೆ ಕನ್ಸೋರ್ಟಿಯಂ ಅಧ್ಯಕ್ಷೆ ಜೋಲಿ ಬೇಬಿ, ಕಾರ್ಯದರ್ಶಿ ಶೈನಿ ಮಾತನಾಡಿದರು. ಹಸಿರು ಕ್ರಿಯಾ ಸೇನೆ ಕನ್ಸೋರ್ಟಿಯಂನ ಜಿಲ್ಲಾ ಸದಸ್ಯೆಯರು ಹಾಗೂ ಬಿಜೆಪಿಯ ಹಿರಿಯ ಕಾರ್ಯಕರ್ತರನ್ನು ಕಾರ್ಯ ಕ್ರಮದಲ್ಲಿ ಸನ್ಮಾನಿಸಲಾಯಿತು.

RELATED NEWS

You cannot copy contents of this page