ಮಂಜೇಶ್ವರ: ಇಂಟರ್ಲಾಕ್ ಬ್ರಿಕ್ಸ್ ನಿರ್ಮಿಸುವ ಸಂಸ್ಥೆಗೆ ಕಳ್ಳರು ನುಗ್ಗಿ ಭಾರೀ ಪ್ರಮಾಣದ ಸಾಮಗ್ರಿಗಳನ್ನು ಕಳವು ನಡೆಸಿದ್ದಾರೆ. ಬಡಾಜೆ ಪಾಪಿಲ ದಲ್ಲಿ ಕಾರ್ಯವೆಸಗುತ್ತಿರುವ ಕನ್ಸ್ಟ್ರಕ್ಷನ್ ಮೆಟೀರಿಯಲ್ ಪಾಪಿಲ ಇಂಟರ್ ಲಾಕಿಂಗ್ ಕಾಂಕ್ರೀಟ್ ಬ್ರಿಕ್ಸ್ ಎಂಬ ಹೆಸರಿನ ಸಂಸ್ಥೆಯಿಂದ ಕಳವು ನಡೆದಿದೆ. ಸೆಪ್ಟಂಬರ್ 11ರಿಂದ 22ರ ಮಧ್ಯೆ ಕಳ್ಳರು ಸಂಸ್ಥೆಗೆ ನುಗ್ಗಿ ಇಂಟರ್ ಲಾಕ್ ಬ್ರಿಕ್ಸ್ ತಯಾರಿ ಯಂತ್ರದ ಎರಡು ೫ ಎಚ್ಪಿ ಮೋಟಾರ್ಗಳು, ಎರಡು ಅಚ್ಚುಗಳು, ಸೀಲಿಂಗ್ ಫ್ಯಾನ್, ಗ್ಯಾಸ್ ಸಿಲಿಂಡರ್ ಹಾಗೂ ಇಲೆಕ್ಟ್ರಿ ಕಲ್ ವಯರ್ಗಳನ್ನು ನಾಶಗೊಳಿಸಿ ಅದರೊಳಗಿದ್ದ ತಾಮ್ರದ ತಂತಿಗಳನ್ನು ತೆಗೆದು ಸಾಗಿಸಲಾಗಿದೆ. ಇದರಿಂದ 4.30,000 ರೂಪಾಯಿ ಗಳ ನಷ್ಟವುಂಟಾಗಿದೆಯೆಂದು ಸಂಸ್ಥೆಯ ಮಾಲಕ ಕುಂಜತ್ತೂರು ಕೆಎಚ್ಎಂ ಅಪಾರ್ಟ್ ಮೆಂಟ್ ಬಳಿಯ ಅನ್ಸಾಫ್ ಮಂಜಿಲ್ನ ಅಶ್ರಫ್ ಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತನಿಖೆಯಂU ವಾಗಿ ಆ ಪರಿಸರ ಮತ್ತು ಸಮೀಪ ಪ್ರದೇಶಗಳ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.






