ಶಬರಿಮಲೆಗೆ ಯುವತಿ ಪ್ರವೇಶದ ವಿರುದ್ಧ ಹೋರಾಟ: ಗಂಭೀರವಲ್ಲದ ಪ್ರಕರಣಗಳನ್ನು ಹಿಂತೆಗೆಯಲು ಸರಕಾರ ತೀರ್ಮಾನ

ತಿರುವನಂತಪುರ: ಶಬರಿಮಲೆ ದೇಗುಲಕ್ಕೆ ಪರಂಪರಾಗತ ಆಚಾರಗಳನ್ನು ಉಲ್ಲಂಘಿಸಿ ಯುವತಿಯರಿಗೆ  ಈ ಹಿಂದಿನ ಎಡರಂಗ ಸರಕಾರ ನೀಡಿದ ಪ್ರವೇಶಾನುಮತಿಯನ್ನು ಪ್ರತಿಭಟಿಸಿ ನಡೆದ ಹೋರಾಟಗಳಿಗೆ ಸಂಬಂಧಿಸಿ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣಗಳ ಪೈಕಿ ಗಂಭೀರವಲ್ಲದ ಎಲ್ಲಾ ಪ್ರಕರಣಗಳನ್ನು ತೆಗೆದುಕೊ ಳ್ಳಲು ರಾಜ್ಯ ಸರಕಾರ ಮುಂದಾಗಿದೆ.

ಗಂಭೀರ ರೂಪದ ದಾಳಿ  ಹಾಗೂ ಇತರ ಗಂಭೀರ ಸ್ವರೂಪದ ಪ್ರಕರಣಗಳನ್ನು ಹೊರತುಪಡಿಸಿ ಇತರ ಎಲ್ಲಾ ಪ್ರಕರಣಗಳನ್ನು ಹಿಂತೆಗೆದು ಕೊಳ್ಳಲು ಸರಕಾರ ತೀರ್ಮಾನಿಸಿದೆ.

ಶಬರಿಮಲೆ ಕ್ಷೇತ್ರದಲ್ಲಿನ ಪರಂಪರಾಗತ ಆಚಾರ ಮತ್ತು ಅನುಷ್ಠಾನಗಳಿಗೆ ತದ್ವಿರುದ್ಧವಾಗಿ ಯುವತಿಯರಿಗೆ ಪ್ರವೇಶ ನೀಡಬಾರದೆಂಬ ಅಚಲ ನಿಲುವನ್ನು ಯುಡಿಎಫ್ ಸರಕಾರ ತಾಳಿದ್ದು, ಈ ನಿಲುವನ್ನು ಸುಪ್ರೀಂಕೋರ್ಟ್‌ಗೆ ತಿಳಿಸುವ ಅಗತ್ಯದ ಕ್ರಮದಲ್ಲೂ ತೊಡಗಿದೆ.

ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಿತಿಯ ಮಹಿಳೆಯರಿಗೆ ಪ್ರವೇಶಾನುಮತಿ ನೀಡಿ 2018 ಸೆಪ್ಟಂಬರ್‌ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಅದನ್ನು ಅದೇ ರೀತಿ ಜ್ಯಾರಿಗೊಳಿಸಲು ಅಂದಿನ ಎಡರಂಗ ಸರಕಾರ ಮುಂದಾಗಿತ್ತು. ಅದರ ವಿರುದ್ಧ ಶಬರಿಮಲೆ ಕ್ಷೇತ್ರ ಪರಿಸರ ಮಾತ್ರವಲ್ಲ ರಾಜ್ಯಾದ್ಯಂತವಾಗಿ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ ಭಾರೀ  ಹೋರಾಟ ನಡೆಸಿದ್ದವು. ಹೀಗೆ ಹೋರಾಟ ನಡೆಸಿದವರ ವಿರುದ್ಧ  ಪೊಲೀಸರು  ಪ್ರಕರಣ ದಾಖಲಿಸಿ ಅದೆಷ್ಟೋ ಮಂದಿಯನ್ನು ಬಂಧಿಸಿದ್ದರು.  ಹೀಗೆ ನಡೆದ ಹೋರಾಟಗಳಿಗೆ ಸಂಬಂಧಿಸಿ ಪೊಲೀಸರು ರಾಜ್ಯಾದ್ಯಂತವಾಗಿ  ಒಟ್ಟು 2,624 ಪ್ರಕರಣಗಳನ್ನು ದಾಖಲಿಸಿಕೊಂ ಡಿದ್ದರು. ಇದರಲ್ಲಿ ವಿಶ್ವಹಿಂದೂ ಪರಿಷತ್, ಹಿಂದೂ ಐಕ್ಯವೇದಿ, ಅಯ್ಯಪ್ಪ ಸೇವಾ ಸಂಘಟನೆಗಳು ಹಾಗೂ ಇತರ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ನೇತಾರರು ಮತ್ತು ಕಾರ್ಯಕರ್ತರೂ ಒಳಗೊಂಡಂತೆ ಒಟ್ಟು 29,119 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದರು.  ಈ ಪೈಕಿ ಗಂಭೀರವಲ್ಲದ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯಸರಕಾರ ಈಗ ತೀರ್ಮಾನಿಸಿದೆ. ಹೀಗೆ ಹಿಂಪಡೆದುಕೊಳ್ಳಲಾಗುವ ಪ್ರಕರಣಗಳ ಪರಿಶೀಲನೆಯಲ್ಲಿ ಸರಕಾರ ಈಗಾಗಲೇ ತೊಡಗಿದೆ.

You cannot copy contents of this page