ವಿಧಾನಸಭೆಯ ಸ್ಪೀಕರ್ ಆಗಿ ತಿರುವಂಜೂರ್ ರಾಧಾಕೃಷ್ಣನ್ ಆಯ್ಕೆ

ತಿರುವನಂತಪುರ: ಹದಿನಾರನೇ ಕೇರಳ ವಿಧಾನಸಭೆಯ ಸ್ಪೀಕರ್ ಆಗಿ ಕಾಂಗ್ರೆಸ್‌ನ ಹಿರಿಯ ನಾಯಕರೂ, ಮಾಜಿ ಗೃಹ ಸಚಿವರೂ ಆಗಿರುವ ತಿರುವಂಜೂರು ರಾಧಾಕೃಷ್ಣನ್ ವಿದ್ಯುಕ್ತವಾಗಿ ಆರಿಸಲ್ಪಟ್ಟಿದ್ದಾರೆ. ಹಂಗಾಮಿ ವಿಧಾನಸಭಾ ಅಧ್ಯಕ್ಷ ಜಿ. ಸುಧಾಕರನ್‌ರ ಅಧ್ಯಕ್ಷತೆಯಲ್ಲಿ ಹೊಸ ವಿಧಾನಸಭಾ ಸ್ಪೀಕರ್ ಸ್ಥಾನಕ್ಕಾಗಿ ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ನಡೆದ ಚುನಾವಣೆಯಲ್ಲಿ ವಿಧಾನಸಭೆಯ ಒಟ್ಟು 140 ಸದಸ್ಯರಲ್ಲಿ ಯುಡಿಎಫ್ ಉಮೇದ್ವಾರ ತಿರುವಂಜೂರು ರಾಧಾಕೃಷ್ಣನ್‌ರಿಗೆ 101 ಮತಗಳು ಲಭಿಸಿ ಅವರು ಸ್ಪೀಕರ್ ಆಗಿ ಆಯ್ಕೆಗೊಂಡರು.  ಸ್ಪೀಕರ್ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಎಡರಂಗದ ಎ.ಸಿ. ಮೊಯ್ದೀನ್‌ರಿಗೆ 35 ಮತ್ತು ಎನ್‌ಡಿಎ (ಬಿಜೆಪಿ) ಉಮೇದ್ವಾರರಾಗಿ ಸ್ಪರ್ಧಿಸಿದ ಬಿ.ಬಿ.  ಗೋಪಕುಮಾರ್‌ರಿಗೆ 3 ಮತ ಗಳು ಲಭಿಸಿತು. ಕೇರಳ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕಾಗಿ ನಡೆದ ಚುನಾ ವಣೆಯಲ್ಲಿ ಬಿಜೆಪಿ ಸ್ಪರ್ಧಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ ಎಂಬ ವಿಶೇಷತೆಯೂ ಇದೆ.

ವಿಧಾನಸಭೆಯ ಒಟ್ಟು 140 ಸದಸ್ಯರ ಪೈಕಿ 139 ಮತದಾನದಲ್ಲಿ ಪಾಲ್ಗೊಂಡರು. ಚುನಾವಣೆಯನ್ನು ನಿಯಂತ್ರಿಸಿದ ಹಂಗಾಮಿ ಸ್ಪೀಕರ್ ಜಿ. ಸುಧಾಕರನ್ ಮತ ಚಲಾ ಯಿಸಲಿಲ್ಲ. ಮುಖ್ಯಮಂತ್ರಿ ವಿ.ಡಿ. ಸತೀಶನ್ ಮೊದಲು ಮತ ಚಲಾಯಿ ಸಿದರು. ತಿರುವಂಜೂರು ರಾಧಾಕೃಷ್ಣನ್ ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆ ಗೊಂಡ ಬೆನ್ನಲ್ಲೇ ಅವರನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ವಿರೋಧ ಪಕ್ಷ ನಾಯಕ ಪಿಣರಾಯಿ ವಿಜಯನ್ ಸೇರಿ ವಿಧಾನಸಭಾ ಅಧ್ಯಕ್ಷರ ಪೀಠಕ್ಕೆ ಕರೆ ತಂದರು. ವಿಧಾನಸಭಾ ಉಪ ಸಭಾಪತಿ ಸ್ಥಾನಕ್ಕಿರುವ ಚುನಾವಣೆ ಜೂನ್ 1ರಂದು ನಡೆಯಲಿದೆ.

You cannot copy contents of this page