ಯೋಜನಾ ಮೊತ್ತ ಕಡಿತ: ಮೀಂಜ ಪಂ.ಗೆ ಎಲ್‌ಡಿಎಫ್ ಮಾರ್ಚ್

ಮಂಜೇಶ್ವರ: ಸ್ಥಳೀಯಾಡಳಿತ ಸಂಸ್ಥೆಗಳ ಯೋಜನಾ ನಿಧಿ ಕಡಿತಗೊಳಿಸಿದ, ಸ್ತ್ರೀ ಸುರಕ್ಷಾ ಪಿಂಚಣಿ ರದ್ದುಗೊಳಿಸಿದ, ಲೈಫ್ ಭವನ ಯೋಜನೆಯನ್ನು ಬುಡಮೇಲುಗೊಳಿಸಿದ, ಉದ್ಯೋಗ ಖಾತರಿ ಯೋಜನೆಯ ಮೊತ್ತ ಕಡಿತಗೊಳಿಸಿದ ಯುಡಿಎಫ್ ಸರಕಾರದ ಜನದ್ರೋಹ ನೀತಿಗೆದುರಾಗಿ ಎಡರಂಗದ ನೇತೃತ್ವದಲ್ಲಿ ಮೀಂಜ ಪಂಚಾಯತ್ ಕಚೇರಿ ಮಾರ್ಚ್ ನಡೆಸಲಾಯಿತು. ಸಿಪಿಐ ರಾಜ್ಯ ಕೌನ್ಸಿಲ್ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಕಮಲಾಕ್ಷ ದೇರಂಬಳ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಏರಿಯಾ ಸಮಿತಿ ಸದಸ್ಯ ಹಾರಿಸ್ ಪೈವಳಿಕೆ, ಸಿಪಿಐ ನೇತಾರ ಮುಸ್ತಫಾ ಕಡಂಬಾರ್ ಮಾತನಾಡಿದರು. ಲೋಕೇಶ ಚಿನಾಲ, ರಾಮಚಂದ್ರ ಟಿ, ಪಂಚಾಯತ್ ಸದಸ್ಯೆ ಶರ್ಮಿಳಾ ಕುಳೂರು ಭಾಗವಹಿಸಿದರು. ಸಿಪಿಐ ನೇತಾರ ಜಯರಾಮ ಬಲ್ಲಂಗುಡೇಲು ಸ್ವಾಗತಿಸಿದರು.

RELATED NEWS

You cannot copy contents of this page