ಮುಳ್ಳೇರಿಯ: ಬೈಕ್ನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಅಡೂರು ನಿವಾಸಿ ಸೆರೆ ಯಾಗಿದ್ದಾನೆ. ಪಳ್ಳಂಗೋಡು ಮೀತಲೆ ವೀಟಿಲ್ ಎಂ.ಎ. ಮುಹಮ್ಮದ್ ಶಬಾದ್ (30)ನನ್ನು ಪಯ್ಯನ್ನೂರು ಎಸ್ಐ ಕೆ. ಸುಹೈಲ್ ಹಾಗೂ ತಂಡ ಬಂಧಿಸಿದೆ. ಇಂದು ಮುಂಜಾನೆ 1.30ರ ವೇಳೆ ಕರಿವೆಳ್ಳೂರು ಪುದಿಯಂಗಾವ್ನಿಂದ ಈತ ಸೆರೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನಿಂದ 4.55 ಗ್ರಾಂ ಎಂಡಿಎಂಎ ಹಾಗೂ ಸಾಗಿಸಲು ಉಪಯೋಗಿಸಿದ ಬೈಕನ್ನು ಪೊಲೀಸರು ವಶಕ್ಕೆ ತೆಗೆದಿದ್ದಾರೆ.ಪುದಿಯಂಗಾವ್ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಪಯ್ಯನ್ನೂರು ಭಾಗದಿಂದ ಬರುತ್ತಿದ್ದ ಬೈಕ್ಗೆ ಕೈ ತೋರಿಸಿ ನಿಲ್ಲಿಸಿ ಪರಿಶೀಲಿ ಸಿದಾಗ ಒಳ ಉಡುಪಿನೊಳಗೆ ಪ್ಲಾಸ್ಟಿಕ್ ಕವರ್ನಲ್ಲಿರಿಸಿದ ಸ್ಥಿತಿಯಲ್ಲಿ ಮಾದಕ ಪದಾರ್ಥವನ್ನು ಪತ್ತೆಹಚ್ಚಲಾಗಿದೆ. ಪಯ್ಯನ್ನೂರು ಪೊಲೀಸರು ಕೇಸು ದಾಖಲಿಸಿದ್ದಾರೆ.






