ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದರೆ 500ರೂ. ದಂಡ

ಕಾಸರಗೋಡು: ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸು ವವರಿಗೆ ಹೇರಲಾಗುವ ಕನಿಷ್ಠ ದಂಡವನ್ನು 250 ರೂ.ನಿಂದ 5೦೦ ರೂಪಾಯಿಗೆ ಹೆಚ್ಚಿಸಲಾಗಿದೆ. ರೈಲು ಪ್ರಯಾಣ ವೇಳೆ ಟಿಕೆಟ್ ಇಲ್ಲದಿದ್ದಲ್ಲಿ ಲಾಸ್ಟ್ ಟಿಕೆಟ್ ಚೆಕ್ಕಿಂಗ್ ಪಾಯಿಂಟ್‌ನ ನಂತರದ ಮೊತ್ತ ಹಾಗೂ ಅದರೊಂದಿಗೆ 5೦೦ ರೂ. ದಂಡ ಪಾವತಿಸಬೇಕಾಗಿ ಬರಲಿದೆ.

ದಂಡ ಪಾವತಿಸದಿದ್ದಲ್ಲಿ ಆರು ತಿಂಗಳವರೆಗೆ ಸಜೆ ಅಥವಾ ದಂಡ ಸಹಿತ ಸಜೆ ಅನುಭವಿಸಬೇಕಾಗಿ ಬರಲಿದೆ. ಜುಲೈ 1 ರಿಂದ ಈ ಕಾನೂನು ಜ್ಯಾರಿಗೆ ಬರಲಿದೆ. ಜನ್ ವಿಶ್ವಾಸ್ ಆಕ್ಟ್ ಪ್ರಕಾರ ಈ ಕ್ರಮಕ್ಕೆ ರೈಲ್ವೇ ಮುಂದಾಗಿದೆ.

You cannot copy contents of this page