ಮಂಜೇಶ್ವರ: ಕುಂಜತ್ತೂರಿನ ಪೀಸ್ ಕ್ರಿಯೇಟಿವ್ ಶಾಲೆ ೨೦೨೬ -೨೭ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಒಂದು ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಶಾಲೆಯು ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಸ್ವಾಗತಿಸುವುದರೊಂದಿಗೆ, ಕುರ್‌ಆನ್ ಅನ್ನು ಸಂಪೂರ್ಣವಾಗಿ ಕಂಠಪಾಠ (ಹಿಫ್‌ಝ್) ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಾಹುಲ್ ಹಮೀದ್ – ರಜಿಯಾ ದಂಪತಿ ಪುತ್ರ ಹಾಫಿಲ್ ಮೊಹಿಯುದ್ದೀನ್ ಮಿಸಾಬ್ ಹಾಗೂ ಅಬ್ದುಲ್ ರಝಾಕ್ – ನಬೀಸಾ ದಂಪತಿ ಪುತ್ರ ಹಾಫಿಲ್ ಅಬ್ದುಲ್ ನೌಫಲ್ ಎಂಬೀ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಹಾಫಿಝ್ ಆಗಿರುವ ವಿದ್ಯಾರ್ಥಿಗಳು ಖುರ್ ಆನ್ ನ ಕೊನೆಯ ವಚನವನ್ನು ಓದಿ ಪೂರ್ಣಗೊಳಿಸಿದರು. ಈ ಸಂದರ್ಭ ಶಾಲಾ ಚೇಯರ್ ಮ್ಯಾನ್ ಹಾಜಿ ಅಬ್ದುಲ್ ರಹ್ಮಾನ್ ಅರಿಮಲ, ಪ್ರಾಂಶುಪಾಲ ಅಬ್ದುಲ್ ಖಾದರ್, ಕೋರ್ಡಿನೇಟರ್ ಗಳಾದ ಝಕಿಯಾ ಬಾನು, ಆಯಿಷಾ, ಅನೂದ್, ಖೈರುನ್ನಿಸ, ಅಧ್ಯಾಪಕರುಗಳು ಪೋಷಕರು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದರು. ಆಡಳಿತ ಮಂಡಳಿ ಮತ್ತು ಶಿಕ್ಷಕರು ಈ ವಿದ್ಯಾರ್ಥಿ ಗಳ ಸಾಧನೆಗೆ ಹಾರೈಸಿ, ಅಭಿನಂದನೆ ಗಳನ್ನು ಸಲ್ಲಿಸಿದರು. ವಿದ್ಯಾರ್ಥಿಗಳು ಸಾಧಿಸಿರುವ ಈ ಉನ್ನತ ಸಾಧನೆಯು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಯಾಗಲಿ ಎಂದು ಶಾಲಾ ವತಿಯಿಂದ ಹಾರೈಸಲಾಯಿತು.






