ಹಿರಿಯ ವ್ಯಾಪಾರಿ ನಿಧನ

ಪೈವಳಿಕೆ: ಬಾಯಾರು ಕೊಜಪ್ಪೆ ನಿವಾಸಿ, ಹಿರಿಯ ವ್ಯಾಪಾರಿ ಪಿ.ಅಬೂಬಕ್ಕರ್ (70) ನಿಧನ ಹೊಂದಿದರು. ಒಂದು ವಾರದ ಹಿಂದೆ ಅಸೌಖ್ಯ ಉಂಟಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಶನಿವಾರ ರಾತ್ರಿ ನಿಧನ ಹೊಂದಿದರು. ಚಿಪ್ಪಾರುಪದವುನಲ್ಲಿ ಕಳೆದ 22 ವರ್ಷಗಳಿಂದ ಜಿನಸಿ ವ್ಯಾಪಾರಿಯಾಗಿದ್ದರು. ಅಲ್ಲದೆ ‘ಕಾರವಲ್’ ಏಜಂಟ್ ಆಗಿದ್ದರು. ಮೃತರು ಪತ್ನಿ ನೆಬೀಸ, ಮಕ್ಕಳಾದ ಅಜ್ಮೀಯತ್ ನಿಶಾ, ಮೊಹಮ್ಮದ್ ಅಲ್ತಾಫ್, ಅಬ್ದುಲ್ ಮುತ್ತಲೀಬ್, ಮೊಹಮ್ಮದ್ ತಶ್ರೀಫ್, ಅಲೀಮತ್ ನಸೀಬ, ಅಳಿಯಂದಿರಾದ ರಜಾಕ್, ಕಲೀಲ್, ಸೊಸೆಯಂದಿರಾದ ಅಫೀಫ, ತಾಜುನ್ನೀಸ, ಸಹೋದರ ಮೊಹಮ್ಮದ್, ಸಹೋದರಿಯರಾದ ಬೀಫಾತಿಮ್ಮ, ಸಫಿಯಾ, ಆಯಿಷ, ನೆಬೀಸ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page