ಅಧಿವೇಶನ ರಾಜ್ಯಪಾಲರ ಭಾಷಣದೊಂದಿಗೆ ಚಾಲನೆ: ಕಲ್ಯಾಣ ಪಿಂಚಣಿ 3000 ರೂ.ಗೇರಿಕೆ ; ವಿದ್ಯಾರ್ಥಿನಿಯರಿಗ ಮೂರು ದಿನ ಋತುಚಕ್ರ ರಜೆ

ತಿರುವನಂತಪುರ: 16ನೇ ವಿಧಾನಸಭೆಯ ಮೊದಲ ನೀತಿಗಳನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಭಾಷಣದ ಮೂಲಕ ಘೋಷಿಸುವುದರೊಂದಿಗೆ  ವಿಧಾ ನಸಭಾ ಅಧಿವೇಶನ ಇಂದು ಬೆಳಿಗ್ಗೆ ಪುನರಾರಂಭಗೊಂಡಿತು. ಕೇರಳದ ವಿಧಾನಸಭೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎಂಬಂತೆ ವಂದೇ ಮಾತರಂ ಗೀತೆಯ ಆಲಾಪನೆಯೊಂದಿಗೆ ಆರಂಭಗೊಡ ವಿಧಾನಸಭಾ ಅಧಿವೇಶನ ಇದಾಗಿದೆಯೆಂಬ ವಿಶೇಷತೆಯೂ ಇಂದಿನ ಅಧಿವೇಶನ ಹೊಂದಿದೆ. ಆದರೆ ವಂದೇ ಮಾತರಂ ಗೀತೆಯ ಪೂರ್ಣ ಆಲಾಪನೆ ನಡೆಸದೆ  ಮೊದಲ ಸಾಲನ್ನು ಮಾತ್ರವೇ ಆಲಾಪಿಸಲಾಯಿತು.

ರಾಜ್ಯದ ಎಲ್ಲಾ ಕುಟುಂಬದವರಿಗೂ ತಲಾ 25 ಲಕ್ಷ ರೂ.ಗಳ ಚಿಕಿತ್ಸಾ ನೆರವು ಲಭಿಸುವ ಉಮ್ಮನ್ ಚಾಂಡಿ ಆರೋಗ್ಯ ವಿಮಾ ಯೋಜನೆ ಜ್ಯಾರಿಗೊಳಿಸಲಾಗುವುದು. ಕೆಎಸ್‌ಆರ್‌ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಲಾಗುವುದು. ಸಾಮಾಜಿಕ ಕಲ್ಯಾಣ ಪಿಂಚಣಿ 3000 ರೂ.ಗೇರಿಸ ಲಾಗುವುದು.  ವಯೋಜನ ಸೌಹಾರ್ದ ಯೋಜನೆ ಜ್ಯಾರಿಗೊ ಳಿಸಲಾಗುವುದು.  ಆಡಳಿತವನ್ನು ಪಾರದರ್ಶಕಗೊಳಿಸಲಾಗು ವುದು. ಕೇಂದ್ರ ಸರಕಾರದೊಂದಿಗೆ ಉತ್ತಮ ರೀತಿಯ ಸಹಕಾರದೊಂದಿಗೆ ಮುಂದಕ್ಕೆ ಸಾಗಲಾಗುವುದು, ಕೇರಳವನ್ನು ಬಂದರು ಹಬ್ ಆಗಿ ಬದಲಾಯಿಸ ಲಾಗುವುದು.  ಭ್ರಷ್ಟಾಚಾರಮುಕ್ತ ಆಡಳಿತ ಖಾತರಿಪಡಿಸಲಾಗುವುದು.

ಮಲಬಾರಿನ ದೇವಸ್ಥಾನಗಳನ್ನು ತೀರ್ಥಾಟನಾ ಪ್ರವಾಸಿ ಕೇಂದ್ರಗಳ ನ್ನಾಗಿಸಲಾಗುವುದು.  ವಖ್ಫ್ ಮಂಡಳಿಯನ್ನು ನವೀಕರಿಸಲಾಗುವುದು.

 ಶಾಲಾ ವಿದ್ಯಾರ್ಥಿನಿಯರಿಗೆ ಮೂರು ದಿನಗಳ ಋತುಚಕ್ರ ರಜೆ ನೀಡಲಾಗುವುದು. ಒಳನಾಡ ಮೀನು ಗಾರಿಕೆಗೆ ಪ್ರೋತ್ಸಾಹ ನೀಡಲಾಗುವುದು. ಐ.ಟಿ ಇಲಾಖೆಯ ಹೆಸರನ್ನು ಇನ್ನೂ ಫ್ಯೂಚರ್ ಟೆಕ್ನೋಲಜಿ ಎಂದಾಗಿ ಬದಲಾಯಿಸಲಾಗುವುದು.  ಸಂಶೋ ಧನಾ  ವಿದ್ಯಾರ್ಥಿಗಳಿಗೆ ಇನ್ನಷ್ಟು ಸ್ಕಾಲರ್‌ಶಿಪ್ ನೀಡಲಾಗು ವುದು.  ಉನ್ನತ ಶಿಕ್ಷಣ ರಂಗದ ವಿದ್ಯಾರ್ಥಿಗಳಿಗೆ ತಿಂಗಳಿಗೆ ತಲಾ 1000 ರೂ.ನಂತೆ ಸಹಾಯಧನ ನೀಡಲಾಗುವುದು.

ಕೃಷಿ ಅಭಿವೃದ್ಧಿಗೆ ಅತೀ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಸಹಕಾರಿ ಸಂಸ್ಥೆಗಳಲ್ಲಿ ಸೇವೆ ನಡೆಸುತ್ತಿರುವ  ವಂಚನೆಗಳಿಗೆ  ಕಡಿವಾಣ ಹಾಕಲಾಗು ವುದು. ಪ್ಲಸ್‌ವನ್ ಸೀಟುಗಳನ್ನು ಹೆಚ್ಚಿಸಲಾಗುವುದು.  ಥಿಯೇಟರ್ ವಲಯಗಳಿಗೆ ಪ್ರೋತ್ಸಾಹ ನೀಡಲಾಗುವುದು. ಕಿರು ಉದ್ದಿಮೆಗಳಿಗೆ ಅಗತ್ಯದ ಬೆಂಬಲ ನೀಡಲಾಗುವುದು. 

ಆರ್ಥಿಕ ಶಿಸ್ತು ಕ್ರಮ ಖಾತರಿಪಡಿಸಲಾಗುವುದು. ಅಬಕಾರಿ ಇಲಾಖೆಯನ್ನು ನವೀಕರಿಸಲಾಗುವುದು. ಸಪ್ಲೈಕೋ ಸೂಪರ್ ಮಾರ್ಕೆಟ್‌ಗಳನ್ನು ನವೀಕರಿಸಲಾಗುವುದು. ಮಾವೇಲಿ ಸ್ಟೋರ್ ಗಳು ಮತ್ತು ರೇಶನ್ ಅಂಗಡಿಗಳ ಸಂಖ ಹೆಚ್ಚಿಸಲಾಗುವುದು. ಕಡಿಮೆ ವೆಚ್ಚದ ಚಿಕಿತ್ಸಾ ಸೌಕರ್ಯ ಖಾತರಿಪಡಿಸ ಲಾಗುವುದು. ಭತ್ತ, ರಬ್ಬರ್, ತೆಂಗು ಕೃಷಿಕರಿಗೆ ಅರ್ಹ ಪರಿಗಣನೆ ನೀಡಲಾಗುವುದು.

ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಆರು ತಿಂಗಳ ಹೆರಿಗೆ ರಜೆ ಕಡ್ಡಾಯಗೊಳಿಸಲಾಗುವುದು. ರಾಜ್ಯದಲ್ಲಿ ಚತುಷ್ಪಥ ರಸ್ತೆಗಳ ಸಂಖ್ಯೆ ಹೆಚ್ಚಿಸಲಾಗುವುದು.  ಆರೋಗ್ಯ ವಲಯದಲ್ಲಿ ಆಧುನಿಕ ಚಿಕಿತ್ಸಾ ಸೌಕರ್ಯ ಖಾತರಿಪಡಿಸಲಾವುದು. ಕೇರಳನ್ನು ಮಾದಕದ್ರವ್ಯ ವ್ಯಸನ ಮುಕ್ತ ರಾಜ್ಯವನ್ನಾಗಿ ಪರಿವರ್ತಿಸಲಾಗುವುದು. ಮಾದಕ ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಸೇರಿದಂತೆ ಯುಡಿಎಫ್ ಸರಕಾರದ ನೀಡಿದ ಭರವಸೆಗಳನ್ನೆಲ್ಲಾ ರಾಜ್ಯಪಾಲರು ತಮ್ಮ ಭಾಷಣದಲ್ಲಿ ವಿವರಿಸಿದ್ದಾರೆ.

You cannot copy contents of this page