ಚುನಾವಣೆ ಸೋಲಿನ ಹೊಣೆಯನ್ನು ವಿರೋಧ ಪಕ್ಷ ಎಸ್‌ಐಆರ್ ಮೇಲೆ ಹೊರಿಸುತ್ತಿದೆ- ಉಲ್ಲಾಸ್ ಬಾಬು

ಹೊಸದುರ್ಗ: ಜನಬೆಂಬಲ ಸಂಪೂರ್ಣವಾಗಿ ಕುಸಿದಿದೆ ಎಂಬ ಅರಿವಿಲ್ಲದೆ ಎಂಭತ್ತಕ್ಕೂ ಹೆಚ್ಚು ಚುನಾವಣಾ ಸೋಲುಗಳ ಹೊಣೆಯನ್ನು ಎಸ್‌ಐಆರ್ ಪ್ರಕ್ರಿಯೆಯ ಮೇಲೆ ಹೊರಿಸಿ ಕಾಂಗ್ರೆಸ್ ಸಿಪಿಎಂ ಸೇರಿದ ವಿರೋಧ ಪಕ್ಷಗಳು ದೆಹಲಿಯಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಿವೆ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಉಲ್ಲಾಸ್‌ಬಾಬು ಹೇಳಿದರು.

ಸಿಪಿಎಂನ ಅರಾಜಕತೆ, ಹಿಂಸಾಚಾರ ಮತ್ತು ಭ್ರಷ್ಟಾಚಾರ ವಿರುದ್ಧ ಬಿಜೆಪಿ ಕಾಞಂಗಾಡ್ ಮಂಡಲ ಸಮಿತಿ ನೇತೃತ್ವದಲ್ಲಿ ನೀಲೇಶ್ವರ ನಗರಸಭೆ ಹಾಗೂ ಮಡಿಕೈ ಪಂಚಾಯತ್‌ಗಳಗಡಿ ಭಾಗವಾದ ಚತುರ ಕಿಣರ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇರಳದಲ್ಲಿ ಪರಸ್ಪರ ಕಿತ್ತಾಡುವ ಕಾಂಗ್ರೆಸ್ ಮತ್ತು ಸಿಪಿಎಂ ದೆಹಲಿಯ ಬೀದಿಗಳಲ್ಲಿ ಒಟ್ಟಾಗಿ ನಿಂತು ಹೋರಾಟ ನಡೆಸುತ್ತಿವೆ. ಕೇರಳದ ವಿವಿಧ ಸಾರ್ವಜನಿಕ ಸಮಸ್ಯೆಗಳು ಚರ್ಚೆಗೆ ಬರಬಾರದು ಎಂಬುದೇ ಎರಡೂ ಪಕ್ಷಗಳ ಉದ್ದೇಶವಾಗಿದೆ ಎಂದು ಅವರು ಆರೋಪಿಸಿದರು. ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಜ್ಯಾರಿಗೊಳಿಸದೆ ಪಿಣರಾಯಿ ವಿಜ ಯನ್ ಅನುಸರಿಸಿದ ನೀತಿಯನ್ನೇ ವಿ.ಡಿ. ಸತೀಶನ್ ಕೂಡಾ ಅನುಸರಿಸುತ್ತಿ ರುವುದಾಗಿ ಅವರು ಆರೋಪಿಸಿದರು.

ಬಿಜೆಪಿ ಕಾಞಂಗಾಡ್ ಮಂಡಲ ಅಧ್ಯಕ್ಷ ಪ್ರಶಾಂತ್ ಅಧ್ಯಕ್ಷತೆ ವಹಿಸಿ ದರು. ಕೆ. ಶ್ರೀಕಾಂತ್, ಎಂ.ಎಲ್. ಅಶ್ವಿನಿ, ಎ. ವೇಲಾಯುಧನ್, ಪಿ.ಆರ್. ಸುನಿಲ್, ಮನುಲಾಲ್ ಮೇಲತ್, ಎಂ. ಬಲ್‌ರಾಜ್, ಎಚ್.ಆರ್. ಸುಕನ್ಯಾ, ಪದ್ಮನಾಭನ್, ಬಿಜಿ ಬಾಬು, ಸಾಗರ್, ಎಂ. ಪ್ರಕಾಶನ್ ಮಾತನಾಡಿದರು. ಈ ವೇಳೆ ಸಿಪಿಎಂನಿಂದ ಹಲವಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಇವರನ್ನು ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಸ್ವಾಗತಿಸಿದರು.

RELATED NEWS

You cannot copy contents of this page