ಧಾರಾಕಾರ ಮಳೆ: ಹಾನಿಗೀಡಾದ ನಗರದ  ರಸ್ತೆಗಳು

ಕಾಸರಗೋಡು: ಭಾರೀ ಮಳೆಗೆ ಕಾಸರಗೋಡು ನಗರದ ಹಲವು ರಸ್ತೆಗಳು ಹದಗೆಟ್ಟು ವಾಹನ ಸಂಚಾರಕ್ಕೆ ಸಮಸ್ಯೆ ಸೃಷ್ಟಿಯಾಗಿದೆ. ತಿಂಗಳುಗಳ ಹಿಂದೆಯಷ್ಟೇ ನೆಲ್ಲಿಕುಂಜೆ ಬಂದರು ಹಾಗೂ ಲೈಟ್‌ಹೌಸ್ ಭಾಗದತ್ತ ಸಾಗುವ ಬೀಚ್ ರಸ್ತೆಗೆ  ಮೆಕ್ಕಡಾಂ ಡಾಮರೀಕರಣ ನಡೆಸಲಾಗಿತ್ತು.   ಬಳಿಕ ಸುರಿದ ಮಳೆಗೆ ಈ ರಸ್ತೆ ಪೂರ್ಣವಾಗಿ ಹಾನಿಗೀಡಾಗತೊಡಗಿದೆ. ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಸೃಷ್ಟಿಯಾಗಿದ್ದು ಅದರಲ್ಲಿ ಮಳೆ ನೀರು ತುಂಬಿಕೊಂಡಿದೆ.  ರಸ್ತೆ ಹದಗೆಟ್ಟಿರುವು ದರಿಂದಾಗಿ ದ್ವಿಚಕ್ರ ವಾಹನಗಳು ಸಹಿತ ಇತರ ವಾಹನಗಳು ಕೂಡಾ ಅಪಘಾತಕ್ಕೀಡಾಗುತ್ತಿರುವುದು ಸಾಮಾನ್ಯವಾಗಿದೆ. ಹಾನಿಗೀಡಾದ ರಸ್ತೆಯ ಕೆಲವೆಡೆಗಳಲ್ಲಿ ಇಂಟರ್ ಲಾಕ್ ಅಳವಡಿಸಿದ್ದರೂ  ಅದು ಹೂತುಹೋಗಿದೆ.   ಮಾತ್ರ ವಲ್ಲದೆ ರಸ್ತೆ ಮೂಲಕ ಸಾಗುವ ನೀರಿನ ಕೊಳವೆಗಳು ಬಿರುಕುಬಿಟ್ಟಿವೆ.  ನಗರದ ಎಂ.ಜಿ ರಸ್ತೆ, ಚಂದ್ರಗಿರಿ ರೂಟ್‌ನ ಕೆಎಸ್ ಟಿಪಿ  ರಸ್ತೆಯ ವಿವಿಧೆಡೆಗಳಲ್ಲ್ಲೂ ಹೊಂಡಗಳು ಸೃಷ್ಟಿಯಾಗಿವೆ. ಸಂಬಂಧಪಟ್ಟವರು ಈ ಬಗ್ಗೆ  ಗಮನಹರಿಸಿ ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಳ್ಳಬೇ ಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.
 

RELATED NEWS

You cannot copy contents of this page