ಮಂಜೇಶ್ವರ: ರಾತ್ರಿ ಹೊತ್ತಿನಲ್ಲಿ ಮನೆಗೆ ನುಗ್ಗಿ ಯುವತಿ ಹಾಗೂ ಆಕೆಯ ಸ್ನೇಹಿತನ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗ ಳನ್ನು ಮಂಜೇಶ್ವರ ಪೊಲೀ ಸರು ಬಂಧಿಸಿದ್ದಾರೆ. ಮಂಜೇಶ್ವರ ನಿವಾಸಿ ಗಳಾದ ಸೆನೋಹರ್ (28), ಅನ್ವರ್ (46) ಎಂಬಿವರು ಬಂಧಿತ ಆರೋಪಿ ಗಳಾ ಗಿದ್ದಾರೆ. ಜೂನ್ 23ರಂದು ರಾತ್ರಿ 10.30ಕ್ಕೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲ್ಲಿ ವಾಸಿಸುವ 27ರ ಹರೆಯದ ಯುವತಿಯ ಮನೆಗೆ ನುಗ್ಗಿದ ಆರೋಪಿಗಳು ಯುವತಿ ಹಾಗೂ ಅಲ್ಲಿದ್ದ ಆಕೆಯ ಸ್ನೇಹಿತನ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿತ್ತು. ವೀಡಿಯೋವನ್ನು ಸಾಮಾಜಿಕಜಾಲ ತಾಣಗಳಲ್ಲಿ ಪ್ರಚಾರ ಮಾಡುವುದಾಗಿ ಬೆದರಿಕೆಯೊಡ್ಡಿ ಯುವತಿಯ ವಜ್ರದ ಬೆಂಡೋಲೆಗಳನ್ನು ಆರೋಪಿಗಳು ಅಪಹರಿಸಿರುವುದಾಗಿ ದೂರಲಾಗಿದೆ. ಆರೋಪಿಗಳು ಯುವ ತಿಗೆ ಹಣಕ್ಕಾಗಿ ಬೆದರಿಕೆಯೊಡ್ಡಿದ್ದು ಅಲ್ಲದೆ ತಮ್ಮೊಂ ದಿಗೆ ಲೈಂಗಿಕ ಸಂಪರ್ಕ ಕ್ಕೂ ಮುಂದಾ ಗುವಂತೆ ಒತ್ತಾಯಿಸಿ ದ್ದಾರೆನ್ನಲಾಗಿದೆ. ಇದರಿಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಳು.






