ಬದಿಯಡ್ಕ: ಬದಿಯಡ್ಕ ಪೊಲೀಸ್ ಹಾಗೂ ಜಿಲ್ಲಾ ನಾರ್ಕೋಟಿಕ್ ಸೆಲ್ ಡಾನ್ಸಾಪ್ ಟೀಂ ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ಸಹಿತ ಇಬ್ಬರನ್ನು ಬಂಧಿಸಲಾಗಿದೆ.
ಕುಂಬ್ಡಾಜೆ ಏತಡ್ಕ ಮಲ್ಲಾರ ಎಂಬಲ್ಲಿನ ಎಂ. ವಿನೀತ್ (22), ಕುಂಬ್ಡಾಜೆ ಅಲ್ಅಮೀನ್ ಮಂಜಿಲ್ನ ಅಹಮ್ಮದ್ ಸನಾಫರ್ (30) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಬದಿಯಡ್ಕ ಎಸ್ಐ ಟಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಇವರನ್ನು ಬಂಧಿಸ ಲಾಗಿದೆ. ವಿನೀತ್ನ ಕೈಯಿಂದ 4 ಗ್ರಾಂ, ಅಹಮ್ಮದ್ ಸನಾಫರ್ನಿಂದ 0.50 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಸನಾಫರ್ ವಿರುದ್ಧ ಕಾಞಂಗಾಡ್ನಲ್ಲಿ ವಾರಂಟ್ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಸಂಚರಿಸಿದ ಬೈಕ್ನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.







