ತಿರುವನಂತಪುರ ಶ್ರೀ ಪದ್ಮನಾಭ ಕ್ಷೇತ್ರದಿಂದ ಅಮೂಲ್ಯ ವಸ್ತುಗಳು ನಾಪತ್ತೆ

ತಿರುವನಂತಪುರ: ಇಲ್ಲಿನ ಶ್ರೀ ಪದ್ಮನಾಭ ಸ್ವಾಮಿ ಕ್ಷೇತ್ರದಿಂದ ಅಮೂಲ್ಯ ವಸ್ತುಗಳು ಕಾಣೆಯಾದ ಬಗ್ಗೆ ವರದಿಯಾಗಿದೆ. ಕಾಣಿಕೆಯಾಗಿ ಲಭಿಸಿದ ಸುಮಾರು 78 ಗ್ರಾಂ ಚಿನ್ನದ ನಾಣ್ಯಗಳು ಕಾಣೆಯಾಗಿವೆ. ದುರಸ್ತಿಗೆಂದು ಕೊಂಡೊಯ್ದ ಚಿನ್ನದ ದೀಪವನ್ನು ಮರಳಿ ತಲುಪಿಸಲಿಲ್ಲ. ಇದರ ಬದಲಾಗಿ ಅಧಿಕೃತ ದಾಖಲೆಗಳಲ್ಲಿಲ್ಲದ ಬೆಳ್ಳಿಯ ದೀಪ ಇರಿಸಲಾಗಿದೆ. ‘ವೈರನಮ’ ಎಂಬ ಆಭರಣ ಆರು ತಿಂಗಳಿಂದ ನಾಪತ್ತೆಯಾಗಿರುವುದಾಗಿಯೂ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಅಡಿಶನಲ್ ಚೀಫ್ ಸೆಕ್ರೆಟರಿಗೆ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

RELATED NEWS

You cannot copy contents of this page