ವಾಹನ ಅಪಘಾತ: ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಉಪ್ಪಳ: ಸೋಂಕಾಲಿನಲ್ಲಿ ಮೊನ್ನೆ ಸಂಜೆ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ  ಮೃತಪಟ್ಟರ. ಪಾಲಕ್ಕಾಡ್ ನಿವಾಸಿಯೂ ಉಪ್ಪಳ ಸೋಂಕಾಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ  ಅನ್ಸಲ್ (37) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಅಲ್ಯುಮಿನಿಯಂ ಫ್ಯಾಬ್ರಿಕೇ ಶನ್ ಕೆಲಸ ನಿರ್ವಹಿಸುತ್ತಿದ್ದರು. ಮೊನ್ನೆ ಮಧ್ಯಾಹ್ನ ವಾಸಸ್ಥಳದಿಂದ ಆಹಾರ ಸೇವಿಸಿ ಸೋಂಕಾ ಲ್‌ನ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದ ವೇಳೆ  ಅನ್ಸಲ್ ಚಲಾಯಿಸುತ್ತಿದ್ದ  ಬೈಕ್‌ಗೆ ಕಾರು ಢಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಗಂಭೀರ ಗಾಯ ಗೊಂಡ ಅನ್ಸಲ್‌ರನ್ನು ನಾಗರಿಕರು ಕೂಡಲೇ ಆಸ್ಪತ್ರೆಗೆ ತಲುಪಿ ಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇವರು ಮೃತಪಟ್ಟರು.  ಫಿರೋಸ್ ಕುನ್ನುಪರಂಬಿಲ್ ಎಂಬವರ ಚಿಕ್ಕಮ್ಮನ ಮಗನಾದ  ಅನ್ಸಲ್ ಪತ್ನಿ ಆಯಿಶ, ಮಕ್ಕಳಾದ ಅಶು, ಹಸ್ನ, ಐರಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page