ಪುತ್ತಿಗೆಯಲ್ಲಿ ಹಿಂದು ಏಕತಾ ಸಮ್ಮೇಳನ: ಸ್ವಾಗತ ಸಮಿತಿ ರೂಪೀಕರಣ

ಸೀತಾಂಗೋಳಿ : ಸವಾಲುಗಳನ್ನು ಮೆಟ್ಟಿನಿಂತು ಇತಿಹಾಸ ಬರೆದ ಚರಿತ್ರೆ ಹಿಂದುವಿನದು ಎಂದು ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅಭಿಪ್ರಾಯಪಟ್ಟಿದ್ದಾರೆ. ಸೀತಾಂಗೋಳಿ ಶ್ರೀ ದೇವಿ ಭಜನಾಮಂದಿರದಲ್ಲಿ ನಿನ್ನೆ ನಡೆದ ಪುತ್ತಿಗೆ ಪಂಚಾಯತ್ ಹಿಂದೂ ಏಕತಾ ಸಮ್ಮೇಳನದ ಸ್ವಾಗತ ಸಮಿತಿ ರೂಪೀಕರಣ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ರಾಮಜನ್ಮಭೂಮಿಗಾಗಿ ನಡೆದ ಹೋರಾಟವನ್ನು ವಿರೋಧಿಸಿದ ವರು, ಹತ್ತಿಕ್ಕಲು ನೋಡಿದವರೂ ಈಗ ರಾಮ ಮಂದಿರ ನೋಡಲು ಹಾತೊರೆಯುತ್ತಿದ್ದಾರೆ ಎಂದವರು ಬೊಟ್ಟು ಮಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಹಲವು ಸವಾಲುಗಳನ್ನು, ಸಂಘರ್ಷಗಳನ್ನು ಎದುರಿಸಿ ಗೆದ್ದು ಎದ್ದು ನಿಂತ ಸುವರ್ಣ ಇತಿಹಾಸವಿದು. ನೂರಾರು ಮಂದಿ ಕಾರ್ಯಕರ್ತರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನದ ಫಲವಾಗಿ ಇಂದು ಸಂಘವು ಈ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ ಎಂದವರು ಹೇಳಿದರು. ಹಿಂದು ಏಕತಾ ಸಮ್ಮೇಳನದ ಸಂಯೋಜಕ್ ಕೃಷ್ಣಪ್ರಸಾದ್ ಮುಗು ಉಪಸ್ಥಿತರಿದ್ದರು. ಅವಿನಾಶ್ ಕಾರಂತ ಪ್ರಸ್ತಾಪ ಮಾಡಿದರು. ವಿಘ್ನೇಶ್ವರ ಮಾಸ್ತರ್, ಅಶೋಕ್ ಮಾಸ್ತರ್ ಬಾಡೂರು, ಗ್ರಾಮೀಣ ಬ್ಯಾಂಕಿನ ನಿವೃತ್ತ ರೀಜಿನಲ್ ಮ್ಯಾನೇಜರ್ ದಾಮೋದರ ದೇಲಂಪಾಡಿ, ಜಯಂತ ಪಾಟಾಳಿ, ಪಂ. ಸದಸ್ಯರಾದ ಲಕ್ಷ್ಮೀ ಭಟ್ ಸೂರಂಬೆÊಲು, ಸತೀಶ್ ಸೇರಿದಂತೆ ಹರೀಶ್ ಸಿದ್ದಿಬಯಲು ಸಹಿತ ಹಲವು ಗಣ್ಯರು ಪಾಲ್ಗೊಂಡರು. ಬಳಿಕ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಮಾ. 8ರಂದು ಹಿಂದು ಏಕತಾ ಸಮ್ಮೇಳನ ಜರಗಲಿದೆ.

RELATED NEWS

You cannot copy contents of this page