16ರ ಬಾಲಕನಿಗೆ ಕಿರುಕುಳ: 36ರ ಯುವತಿ ಸೆರೆ

ಕಾಸರಗೋಡು:  ಪ್ರಾಯಪೂರ್ತಿಯಾಗದ ಬಾಲಕನಿಗೆ ಕಿರುಕುಳ ನೀಡಿದ ಆರೋಪದಂತೆ ಯುವತಿ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 16ರ ಹರೆಯದ  ಬಾಲಕ ನೀಡಿದ ದೂರಿನಂತೆ  36ರ ಹರೆಯದ ಯುವತಿ ವಿರುದ್ಧ ಕೇಸು ದಾಖಲಿಸಲಾಗಿದೆ. ದೂರುಗಾರನಿಗೆ ಈಗ 19 ವರ್ಷ ಪ್ರಾಯವಿದೆ.ತನಗೆ 16 ವರ್ಷಪ್ರಾಯವಿದ್ದಾಗ ಆಟೋದಲ್ಲಿ ಹಾಗೂ ಯುವತಿಯ ಬೆಡ್‌ರೂಂನಲ್ಲಿ  ಕಿರುಕುಳ ನೀಡಿರು ವುದಾಗಿ  ದೂರಿನಲ್ಲಿ ತಿಳಿಸಲಾಗಿದೆ. 2024 ಎಪ್ರಿಲ್ ತಿಂಗಳಲ್ಲಿ ತಿರೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗಲೂ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

RELATED NEWS

You cannot copy contents of this page