ಕಾಸರಗೋಡು: ಮೂವರು ಮಕ್ಕಳನ್ನು ಉಪಯೋಗಿಸಿ ಭಿಕ್ಷಾಟನೆ ನಡೆಸಿದ ಪ್ರಕರಣದ ಆರೋಪಿಯಾ ಗಿರುವ ತಮಿಳುನಾಡಿನ ಮಹಿಳೆಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾ ಧೀಶರಾದ ಟಿ.ಎಚ್. ರಜಿತ ಒಂದು ಲಕ್ಷರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಇದರ ಹೊರತಾಗಿ ನ್ಯಾ ಯಾಲಯದ ನಿನ್ನೆಯ ಕಲಾಪ ಮುಗಿ ಯುವ ತನಕ ಸಜೆಯನ್ನೂ ವಿಧಿಸಲಾಗಿದೆ. ತಮಿಳುನಾಡು ಚೆನ್ನೈ ಕಲ್ಲಕುರುಚ್ಚಿ ಕಟ್ಟುಕ ಪಾಳಯಂ ನಿವಾಸಿ ಮಲ್ಲಿಕಾ (55) ಎಂಬಾಕೆಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 15 ದಿನಗಳ ಸಜೆ ಅನುಭವಿಸಬೇ ಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
2017 ಅಕ್ಟೋಬರ್ 9ರಂದು ಕಾಸರಗೋಡು ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಆರೋಪಿ ಮಲ್ಲಿಕಾ 12, 10 ಮತ್ತು ಎರಡು ವರ್ಷ ಪ್ರಾಯದ ಮಕ್ಕಳನ್ನು ಉಪಯೋಗಿಸಿ ಭಿಕ್ಷಾಟನೆ ನಡೆಸಿದುದಕ್ಕೆ ಸಂಬಂಧಿಸಿ ಆಕೆಯ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದರು. ಅಂದು ಕಾಸರಗೋಡು ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಪಿ. ಅಜಿತ್ ಕುಮಾರ್ ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಇ. ಲೋಹಿತಾಕ್ಷನ್ ಮತ್ತು ಆದಿರಾ ಬಾಲನ್ ನ್ಯಾಯಾಲಯದಲ್ಲಿ ವಾದಿಸಿದ್ದರು. ಇದೇ ಆರೋಪಿಯ ವಿರುದ್ಧ ಮಕ್ಕಳನ್ನು ಉಪಯೋಗಿಸಿ ಭಿಕ್ಷಾಟನೆ ನಡೆಸಿದ ಇನ್ನೊಂದು ಪ್ರಕರಣವೂ ದಾಖಲಾಗಿದೆ.







