ಪೆರ್ಲ: ಬಾಳೆಮೂಲೆ ಸಮೀಪದ ಬಸ್ ತಂಗುದಾಣವೊಂದರಲ್ಲಿ ಶಂಕಾಸ್ಪದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಬಾಳೆಮೂಲೆ ನಿವಾಸಿ ಯಾದ ದಯಾನಂದ (45)ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ದಯಾನಂದ ಮನೆ ಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ಈಶ್ವರಮಂಗಲದಲ್ಲಿರುವ ಸಹೋದರಿ ಗೀತಾರ ಮನೆಯಲ್ಲಿದ್ದ ಇವರು ಮೂರು ವಾರಗಳ ಹಿಂದೆಯಷ್ಟೇ ಬಾಳೆಮೂಲೆಗೆ ಮರಳಿದ್ದರೆನ್ನಲಾಗಿದೆ. ನಿನ್ನೆ ಸಂಜೆ ಇವರು ಬಾಳೆಮೂಲೆಯ ಬಸ್ ತಂಗುದಾಣದಲ್ಲಿ ಮೃತಪಟ್ಟಿರು ವುದು ಸ್ಥಳೀಯರ ಗಮನಕ್ಕೆ ಬಂದಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ದಯಾನಂದ ಪತ್ನಿ ಸೇಸಮ್ಮ, ಪುತ್ರಿ ಶಿಲ್ಪ, ಸಹೋದರಿ ಗೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ತಂದೆ ರಾಮ ನಾಯ್ಕ, ತಾಯಿ ಜಾನಕಿ, ಇನ್ನೋರ್ವ ಸಹೋದರ ರಾಧಾಕೃಷ್ಣ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.






