ಯುವಕ ಬೆಡ್‌ರೂಂನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಯುವಕನೋರ್ವ  ಬೆಡ್‌ರೂಂನ ಕಿಟಿಕಿ ಸರಳಿನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಾಸರಗೋಡು ಕಡಪ್ಪುರ ನಿವಾಸಿಯೂ, ಬೀರಂತಬೈಲು ತ್ಸುನಾಮಿ ಫ್ಲ್ಯಾಟ್‌ನಲ್ಲಿ ವಾಸಿಸುವ ಶರತ್ (36) ಮೃತಪಟ್ಟ ಯುವಕ. ಇವರು ಮೀನು ಕಾರ್ಮಿಕನಾಗಿದ್ದರು. ನಿನ್ನೆ ರಾತ್ರಿ 9ಗಂಟೆ ವೇಳೆ ಶರತ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ.  ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ  ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಘಟನೆ  ಬಗ್ಗೆ  ನಗರಠಾಣೆ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಿ| ರಾಜನ್ ಎಂಬವರ ಪುತ್ರನಾದ ಮೃತರು ತಾಯಿ ಸರಸ, ಪತ್ನಿ ವಿಚಿತ್ರ, ಮಕ್ಕಳಾದ ಶರಣ್‌ರಾಜ್, ಕಲ್ಯಾಣ್, ಸಹೋದರ ರಂಜಿತ್, ಸಹೋದರಿಯರಾದ ಸೂರ್ಯಲಕ್ಷ್ಮಿ, ರಂಜಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page