ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ತಲಪಾಡಿ: ಮನೆಯೊಳಗೆ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ತಲಪಾಡಿ ನಾರ್ಲ ಪಡೀಲ್ ನಿವಾಸಿ ದಿ| ದಾಮೋದರ-ಹರಿಣಾಕ್ಷಿ ದಂಪತಿ ಪುತ್ರ ರಂಜನ್ (38) ಮೃತಪಟ್ಟ ವÀರು. ಇವರು ಕುಂಜತ್ತೂರಿನ ಫರ್ನೀಚರ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ರಾತ್ರಿ ಸುಮಾರು 8ಗಂಟೆ ವೇಳೆ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಸಂಬAಧಿಕರ ಗಮನಕ್ಕೆ ಬಂದಿದೆ. ಕೂಡಲೇ ಅವರನ್ನು ದೇ ರಳಕಟ್ಟೆ ಆಸ್ಪತ್ರೆಗೆ ಕೊಂಡೊ ಯ್ಯಲಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಘಟನೆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲವೆನ್ನಲಾಗಿದೆ. ಇವರು ತೂಮಿನಾಡು ಶ್ರೀ ಮಹಾಕಾಳಿ ಭಜನಾ ಮಂದಿರದ ಸಕ್ರಿಯ ಸದಸ್ಯ ರಾಗಿದ್ದರು. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತರು ತಾಯಿ, ಪತ್ನಿ ಭಾಗ್ಯಲಕ್ಷಿ÷್ಮ, ಪುತ್ರಿ ನಾದ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಉದ್ಯಾವರ ಮಾಡ ರುದ್ರಭೂಮಿಯಲ್ಲಿ ಅಂತ್ಯಸAಸ್ಕಾರ ನಡೆಯಿತು. ನಿಧನಕ್ಕೆ ತೂಮಿನಾಡು ಶ್ರೀ ಮಹಾಕಾಳಿ ಭಜನಾ ಮಂದಿರ, ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನ, ಮಹಾಕಾಳಿ ಕ್ರೀಡಾ ಬಳಗ ತೂಮಿನಾಡು ಇದರ ಪದಾಧಿಕಾರಿಗಳು, ಸದಸ್ಯರು ಸಂತಾಪ ಸೂಚಿಸಿದ್ದಾರೆ.

RELATED NEWS

You cannot copy contents of this page