ಕಾಸರಗೋಡು: ಪೊಯಿನಾಚಿಯಲ್ಲಿ ಯೂತ್ ಕಾಂಗ್ರೆಸ್ ಮುಖಂಡ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಯೂತ್ ಕಾಂಗ್ರೆಸ್ ಉದುಮ ವಿಧಾನಸಭಾ ಮಂಡಲ ಕಾರ್ಯದರ್ಶಿ ಹರಿಕೃಷ್ಣನ್ (32) ಮೃತಪಟ್ಟವರು. ನಿನ್ನೆ ಮಧ್ಯಾಹ್ನ ಪೊಯಿನಾಚಿಯ ಸ್ವಂತ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಪೊಯಿನಾಚಿಯಲ್ಲಿ ಶಿಕ್ಷಣ ರಿಕ್ರೂಟಿಂಗ್ ಏಜೆನ್ಸಿ ನಡೆಸುತ್ತಿದ್ದರು. ಮೊನ್ನೆ ಸಂಜೆಯಿಂದ ಇವರು ನಾಪತ್ತೆಯಾಗಿದ್ದರು. ನಿನ್ನೆ ಬೆಳಿಗ್ಗೆ ಕೂಡಾ ಮನೆಗೆ ತಲುಪದ ಹಿನ್ನೆಲೆಯಲ್ಲಿ ಮಧ್ಯಾಹ್ನ ವೇಳೆ ಮೇಲ್ಪರಂಬ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಕೇಸು ದಾಖಲಿಸಲಿರುವ ಸಿದ್ಧತೆ ಮಧ್ಯೆ ಹರಿಕೃಷ್ಣನ್ ಕಚೇರಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆಂಬ ಮಾಹಿತಿ ಲಭಿಸಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಪರಂಬ ಕೋಲಾಂಕುನ್ನ್ನ ಜನಾರ್ದನನ್ ನಾಯರ್- ರಮಾ ದಂಪತಿ ಪುತ್ರನಾದ ಹರಿಕೃಷ್ಣನ್ ಸಹೋದರ ರವಿ ಕುಮಾರ್ ಹಾಗ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






