ಅನಧಿಕೃತ ಮೀನುಗಾರಿಕೆ ಕರ್ನಾಟಕದ ಮೂರು ಬೋಟ್ಗಳ ವಶ: 7ಲಕ್ಷ ರೂ. ದಂಡ ವಸೂಲಿ
ಕಾಸರಗೋಡು: ಕೇರಳದ ಸಮುದ್ರ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ರಾತ್ರಿವೇಳೆ ಅನಧಿಕೃತವಾಗಿ ಮೀನುಗಾರಿಕೆ ನಡೆಸುತ್ತಿದ್ದ ಕರ್ನಾಟಕದ ಮೂರು ಬೋಟ್ಗಳನ್ನು ಕಾಸರಗೋಡು ಸಮುದ್ರ ಕಿನಾರೆಯಿಂದ ಐದು ನೋಟಿಕಲ್ ದೂರದಿಂದ ಮೀನುಗಾರಿಕಾ ಮರೈನ್ ಎನ್ಫೋ ರ್ಸ್ಮೆಂಟ್ ಮೀನುಗಾರಿಕಾ ಇಲಾಖೆ ಮತ್ತು ಕರಾವಳಿ ಪೊಲೀಸರು ಸೇರಿ ಸಂ ಯುಕ್ತವಾಗಿ ನಡೆಸಿದ ಕಾರ್ಯಾ ಚರಣೆಯಲ್ಲಿ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ನಿಷೇಧಿಸಲಾದ ಪಲ್ಶೀನ್ ಬಲೆ ಉಪಯೋಗಿಸಿ ಮೀನುಕಾರಿಕೆ ನಡೆಸಿದ ಹಾಗೂ ರಾತ್ರಿ ವೇಳೆ ಅನಧಿಕೃತವಾಗಿ ಮೀನುಗಾರಿಕೆ ನಡೆಸಿದುದಕ್ಕೆ ಸಂಬಂಧಿಸಿ ಕೇರಳ ಸಮುದ್ರ ಮೀನುಗಾರಿಕಾ ನಿಯಂತ್ರಣ ಕಾನೂ ನು ಪ್ರಕಾರ ಈ ಬೋ ಟ್ಗಳನ್ನು ವಶಪಡಿಸಲಾಗಿದೆ. ಕರ್ನಾಟಕದ ಬೋಟ್ಗಳಾದ ಶ್ರೇಯ, ಇಂಡಿಯನ್ ಬ್ಲೂ ಮತ್ತು ಜಲಪಂಚಾಕ್ಷರಿ ಎಂಬೀ ಬೋಟ್ ಗಳನ್ನು ಈ ರೀತಿ ವಶಕ್ಕೆ ತೆಗೆದುಕೊಂಡು ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. 7 ಲಕ್ಷ ರೂ. ಜುಲ್ಮಾನೆ ವಿಧಿಸಲಾಗಿದೆ.