ಅಬೂಬಕರ್ ಸಿದ್ದಿಕ್ ಕೊಲೆ ಪ್ರಕರಣ ಕ್ರೈಂಬ್ರಾಂಚ್ ತನಿಖೆ ಆರಂಭ

ಕಾಸರಗೋಡು: ಗಲ್ಫ್ ಉದ್ಯೋಗಿ ಯಾದ ಯುವಕನನ್ನು ಊರಿಗೆ ಕರೆಸಿಕೊಂಡ ಬಳಿಕ ಅಪಹರಿ ಸಿಕೊಂಡೊಯ್ದು ಕೊಲೆಗೈದ ಪ್ರಕರಣದಲ್ಲಿ ಕ್ರೈಂಬ್ರಾಂಚ್ ತನಿಖೆ ಆರಂಭಗೊಂಡಿದೆ. ಡಿವೈಎಸ್ಪಿ ಎಂ. ಸುನಿಲ್ ಕುಮಾರ್, ಇನ್ಸ್‌ಪೆಕ್ಟರ್ ಶ್ರೀಮೋನ್ ಎಂಬಿವರ  ನೇತೃತ್ವದ ಕ್ರೈಂಬ್ರಾಂಚ್ ತಂಡ ಪೈವಳಿಕೆ ಜಂಕ್ಷನ್ ಬಳಿ ಯುವಕನಿಗೆ ಪೈಶಾಚಿಕ ರೀತಿಯಲ್ಲಿ ಹಲ್ಲೆಗೈದ ಜನವಾಸವಿಲ್ಲದ ಮನೆ, ಕೊಲೆ ನಡೆದ ಕಾಡು ಪ್ರದೇಶ ಎಂಬೆಡೆಗಳಲ್ಲಿ ಪರಿಶೀಲನೆ ನಡೆಸಿತು. ಪುತ್ತಿಗೆ ಮುಗುರೋಡ್‌ನ ಅಬೂಬಕರ್ ಸಿದ್ದಿಕ್‌ರ ಕೊಲೆ ಪ್ರಕರಣದಲ್ಲಿ ಈ ತನಿಖೆ ನಡೆಯುತ್ತಿದೆ. ಕ್ರೈಂಬ್ರಾಂಚ್ ತಂಡ ತಲುಪಿ ತಿಖೆ ನಡೆಸುವ ವಿಷಯ ತಿಳಿದು ಅಬೂಬಕರ್ ಸಿದ್ದಿಕ್‌ರ ಸಂಬಂಧಿಕರೂ ಪೈವಳಿಕೆಗೆ ತಲುಪಿದ್ದರು.

2022 ಜೂನ್ 26ರಂದು ಅಬೂಬಕರ್ ಸಿದ್ದಿಕ್‌ರನ್ನು ತಂಡ ಕೊಲೆಗೈದಿತ್ತು. ದಿರ್ಹಾಂ ವ್ಯವಹಾರಕ್ಕೆ ಸಂಬಂಧಿಸಿ ಉಂಟಾದ ತರ್ಕದ ಹಿನ್ನೆಲೆಯಲ್ಲಿ ಅಬೂಬಕರ್ ಸಿದ್ದಿಕ್‌ರನ್ನು ಗಲ್ಫ್‌ನಿಂದ ಊರಿಗೆ ಕರೆಸಿ ತಂಡ ಅಪಹರಿಸಿತ್ತೆನ್ನಲಾಗಿದೆ. ಪೈವಳಿಕೆಯ ಮನೆಯಲ್ಲಿ ಪೈಶಾಚಿಕ ರೀತಿಯಲ್ಲಿ ಹಲ್ಲೆಗೈದ ಬಳಿಕ ಸಮೀಪದ ಕಾಡಿನಲ್ಲಿ ತಲೆಕೆಳಗಾಗಿ ನೇತಾಡಿಸಿ ಕೊಲೆಗೈದಿರು ವುದಾಗಿ ಪ್ರಕರಣ ದಾಖಲಿಸಲಾಗಿದೆ. ಕೊಲೆ ಕೃತ್ಯದ ಬಳಿಕ ಮೃತದೇಹವನ್ನು ಕಾರಿನಲ್ಲಿ ಬಂದ್ಯೋಡಿನ ಆಸ್ಪತ್ರೆಗೆ ತಲುಪಿಸಿದ ಬಳಿಕ ಕೊಲೆಗಡುಕ ತಂಡ ಪರಾರಿಯಾಗಿತ್ತು. ಈ ಪ್ರಕರಣದಲ್ಲಿ ಕೆಲವು ಆರೋಪಿಗಳನ್ನು ಸೆರೆ ಹಿಡಿಯಲಾಗಿತ್ತು. ಆದರೆ ಕೊಲೆ ಕೃತ್ಯದ ಹಿಂದೆ ಒಳಸಂಚು ಇದೆಯೆಂದೂ ಆದ್ದರಿಂದ ಪ್ರಕರಣದ ತನಿಖೆಯನ್ನು ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಸಂಬಂಧಿಕರು ರಂಗಕ್ಕಿಳಿದಿದ್ದರು. ಇದನ್ನು ಪರಿಗಣಿಸಿ ಕೇಸಿನ ತನಿಖೆಯನ್ನು ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು. 

RELATED NEWS

You cannot copy contents of this page