ಆನೆಗುಂದಿ ಶ್ರೀಗಳವರ ಪಟ್ಟಾಭಿಷೇಕ ವರ್ಧಂತಿ ನಾಳೆ, 2ರಂದು
ಪಡುಕುತ್ಯಾರು : ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರ 14ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ವರ್ಧಂತ್ಯುತ್ಸವವು ನಾಳೆ, 2ರಂದು ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ನಡೆಯಲಿದೆ.
ನಾಳೆ ವರ್ಧಂತಿ ಉತ್ಸವದ ಅಂU Àವಾಗಿ ಸಾಮೂಹಿಕ ಚಂಡಿಕಾಯಾಗ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ, ವಾಸ್ತುಶಿಲ್ಪ ಮತ್ತು ಶಿಲ್ಪ ಕಲೆ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಆನೆಗುಂದಿ ಶ್ರೀ ಪ್ರಶಸ್ತಿ ಪ್ರಧಾನ, ಯುವಶಿಲ್ಪಿಗಳಿಗೆ ಅಭಿನಂದನೆ ನಡೆಯಲಿದೆ.
ನಾಳೆ ಶ್ರೀ ಸರಸ್ವತೀ ಯಾಗ ಶಾಲೆ ಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ, ಸಾಮೂಹಿಕ ಶ್ರೀ ಚಂಡಿಕಾ ಯಾಗ ಪೂರ್ಣಾಹುತಿ ನಡೆಯಲಿದೆ. ನಂತರ ಆನೆಗುಂದಿ ಪ್ರತಿಷ್ಠಾನದ ವತಿ ಯಿಂದ ಜಗದ್ಗುರುಗಳವರ ಪಾದ ಪೂಜೆಯ ಬಳಿಕ ಪಟ್ಟಾಭಿಷೇಕ ವರ್ಧಂತಿಯ ವಿಧಿ ವಿಧಾನಗಳ ನಡೆಯಲಿವೆ. ಸಬೆsಯಲ್ಲಿ ವಾಸ್ತು ಪಿತಾಮಹನ್ ಸರ್ವಸಿದ್ಧಿ ಆಚಾರಿ ರಾಷ್ಟ್ರೀಯ ಪ್ರಶಸ್ತಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಖ್ಯಾತಿಯ ವಾಸ್ತುಶಿಲ್ಪಿ ಅಯೋಧ್ಯಾ ರಾಮಮಂದಿರದ ವಾಸ್ತು ಶಿಲ್ಪಿ ಚಂದ್ರಾಕಾAತ ಸೋಂಪುರ್ ಅಹ್ಮದಾಬಾದ್, ಗುಜರಾತ್ ಅವರಿಗೆ ಪ್ರದಾನ ಮಾಡಲಾಗುವುದು. ರಾಷ್ಟ್ರೀಯ ಪ್ರಶಸ್ತಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಮಹಾನ್ ಶಿಲ್ಪಿ ಅಯೋಧ್ಯಾ ಬಾಲರಾಮನ ಶಿಲ್ಪಿ ಅರುಣ್ ಯೋಗಿರಾಜ್, ಮೈಸೂರು ಅವರಿಗೆ. ಪ್ರದಾನ ಮಾಡಲಾಗುವುದು. ಇದೇ ವೇಳೆ ಈ ಬಾರಿಯ ರಥಶಿಲ್ಪಿ ಶ್ರೀ ಸುದರ್ಶನ ಆಚಾರ್ಯ ಉಡುಪಿ, ಹಾಗೂ ಚಿತ್ರ ಕಲಾವಿದ ವೈ ಎನ್ ತಾರನಾಥ ಆಚಾರ್ಯ ಮಂಗಳೂರು ಇವರಿಗೆ ಆನೆಗುಂದಿಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. 2ರಂದು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.