ಮಂಜೇಶ್ವರ : ಆಟವಾಡುತ್ತಿದ್ದ ಎರಡೂವರೆ ವರ್ಷ ಪ್ರಾಯದ ಮಗುವಿನ ಮೇಲೆ ಆವರಣ ಗೋಡೆಯೊಂದು ಕುಸಿದು ಬಿದ್ದು ಮಗುವನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಕುಂಜತ್ತೂರು ಸನ್ನಡ್ಕದಲ್ಲಿ ಘಟನೆ ನಡೆದಿದೆ. ಪರಿಸರದ ಬಾಡಿಗೆ ಕ್ವಾಟ್ರರ್ಸ್ನಲ್ಲಿ ವಾಸವಾಗಿರುವ ಅನ್ಯರಾಜ್ಯ ಕಾರ್ಮಿಕ ಉತ್ತರ ಪ್ರದೇಶ ನಿವಾಸಿ ಮಹಮ್ಮದ್ ಅಮೀನ್ ಎಂಬವರ ಪುತ್ರ ಎರಡೂವರೆ ವರ್ಷದ ಬಾಲಕ ಶೆರ್ಶಾಝ್ ಶಾ ಗಂಭೀರ ಗಾಯಗೊಂಡಿದ್ದಾನೆ. ನೆರೆಯ ಆವರಣ ಗೋಡೆ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ. ವಾರ್ಡ್ ಪ್ರತಿನಿದಿs ಹಾಗೂ ಸ್ಥಳೀಯರ ನೆರವಿನೊಂದಿಗೆ ಮಗುವನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.






