ಆಶಾ ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸಿ ಡಿಸಿಸಿಯಿಂದ ಕಲೆಕ್ಟ್ರೇಟ್ ಮಾರ್ಚ್
ಕಾಸರಗೋಡು: ತಿರುವನಂತಪುರ ಸೆಕ್ರೆಟರಿಯೇಟ್ ಮುಂಭಾಗದಲ್ಲಿ ಮುಷ್ಕರ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸಿ ಕೆಪಿಸಿಸಿ ಆಹ್ವಾನ ಪ್ರಕಾರ ಡಿಸಿಸಿಯ ನೇತೃತ್ವದಲ್ಲಿ ಕಲೆಕ್ಟ್ರೇಟ್‌ನಲ್ಲಿ ಮಾರ್ಚ್ ನಡೆಸಲಾಯಿತು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಕೆ.ಕೆ. ರಾಜೇಂದ್ರನ್, ಪ್ರಧಾನ ಕಾರ್ಯದರ್ಶಿಗಳಾದ ಎಂ.ಸಿ. ಪ್ರಭಾಕರನ್, ಕೆ.ಪಿ. ಪ್ರಕಾಶನ್, ಸೇವಾದಳ್ ರಾಜ್ಯ ಅಧ್ಯಕ್ಷ ರಮೇಶನ್ ಕುದ್ರೆಪ್ಪಾಡಿ, ಹಕೀಂ ಕುನ್ನಿಲ್, ಕೆ. ನೀಲಕಂಠನ್, ಎ. ಗೋವಿಂದನ್ ನಾಯರ್, ಧನ್ಯಾ ಸುರೇಶ್, ಸಿ.ವಿ. ಜೇಮ್ಸ್, ಪಿ. ಕುಂಞಿಕಣ್ಣನ್ ಮಾತನಾಡಿದರು.