ಆಸ್ತಿ ತರ್ಕದಿಂದ ಯುವಕನಿಗೆ ಹಲ್ಲೆ: 6ಮಂದಿ ವಿರುದ್ಧ ಕೇಸು

ಕುಂಬಳೆ: ಆಸ್ತಿ ತರ್ಕದ ಹಿನ್ನೆಲೆಯಲ್ಲಿ ಯುವಕನಿಗೆ ಹಲ್ಲೆಗೈದ ಆರೋಪದಂತೆ ೬ ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಪೆರುವಾಡ್ ನಿವಾಸಿ ಅಬ್ದುಲ್ಲ (42) ಎಂಬವರಿಗೆ ಹಲ್ಲೆಗೈದ ಆರೋಪದಂತೆ ಸಹೋದರರಾದ ಮೊಹಮ್ಮದ್ ಕುಂಞಿ, ಇಕ್ಬಾಲ್, ಇಸ್ಮಾಯಿಲ್, ಲತೀಫ್, ಹಾರಿಸ್, ಸಂಬಂಧಿಕ ಸುಬೈರ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ಮೊನ್ನೆ ರಾತ್ರಿ ಆಸ್ತಿ ತರ್ಕದ ಹೆಸರಲ್ಲಿ ಅಬ್ದುಲ್ಲರಿಗೆ ಆರೋ ಪಿಗಳು ಕಬ್ಬಿಣದ ಸರಳಿನಿಂದ ಹೊಡೆದು ಗಾಯಗೊಳಿ ಸಿರುವುದಾಗಿ ದೂರಲಾಗಿದೆ. ಗಾಯಗೊಂಡ ಅಬ್ದುಲ್ಲ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

RELATED NEWS

You cannot copy contents of this page