ಆಸ್ಪತ್ರೆಯಲ್ಲಿ ಕಳವು: ರೋಗಿಯ ಮೂರೂವರೆ ಪವನ್ ಸರ ದೋಚಿದ ಆರೋಪಿಗಾಗಿ ಶೋಧ

ಕಾಸರಗೋಡು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಯುವತಿಯ ಮೂರೂವರೆ ಪವನ್ ತೂಕದ ಚಿನ್ನದ ಸರವನ್ನು ಕಳವುಗೈದ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಆರೋಪಿಗಾಗಿ ಶೋಧ ಆರಂಭಿಸಿದ್ದಾರೆ.

ಕಾಞಂಗಾಡ್ ಕಾಟಾಡಿ ಕೊಳವಯಲ್‌ನ ಎಂ.ಕೆ. ಖಾಲಿದ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ನಗರದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ದೂರು ದಾತನ ಸಹೋದರಿ ನಫೀಸರ ಸರ ಕಳವಿಗೀಡಾಗಿರುವುದಾಗಿ ದೂರ ಲಾಗಿದೆ. ಅಕ್ಟೋಬರ್ 31ರಂದು ಮಧ್ಯಾಹ್ನ 12 ಹಾಗೂ 1 ಗಂಟೆ ಮಧ್ಯೆ ಕಳವು ನಡೆದಿದೆಯೆನ್ನಲಾಗಿದೆ. ಆರೋಪಿಯ ಪತ್ತೆಗಾಗಿ ಆಸ್ಪತ್ರೆ ಹಾಗೂ ಪರಿಸರ ಪ್ರದೇಶಗಳಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

RELATED NEWS

You cannot copy contents of this page