ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್ಗೆ ಚಾಲನೆ
ಕುಂಬಳೆ: ಇಚ್ಲಂಗೋಡು ಪಚ್ಚಂಬಳ ಹಸ್ರತ್ ಬಾವ ಫಖೀರ್ ವಲಿಯುಲ್ಲಾಗಿ ಹಳ್ರಮಿ ಮಖಾಂ ಉರೂಸ್ಗೆ ಚಾಲನೆ ನೀಡಲಾಯಿತು. ಕೆ.ಎಸ್. ಮಖ್ತಾರ್ ತಂಙಳ್ ಕುಂಬೋಳ್ ಮಖಾಂ ಸಿಯಾರತ್ಗೆ ನೇತೃತ್ವ ನೀಡಿದರು. ಅನ್ಸಾರ್ ಶೆರುಲ್ ಧ್ವಜಾರೋಹಣಗೈದರು. ಉರೂಸ್ ಕಾರ್ಯಕ್ರಮವನ್ನು ನಿನ್ನೆ ಖತೀಬ್ ಮಜೀದ್ ಬಾಖವಿ ಉದ್ಘಾಟಿಸಿದರು. ಕಾರಿಹ ಸಖಾಫಿ ಪ್ರಧಾನ ಭಾಷಣ ಮಾಡಿದರು. ಹಲವರು ಭಾಗ ವಹಿಸಿದರು. ಇಂದು ರಾತ್ರಿ ನೌಷಾದ್ ಬಾಖವಿ ಚಿರಯಿನ್ ಕೀಳ್ ಪ್ರವಚನ ನಡೆಸುವರು.