ಇನ್ಶೂರೆನ್ಸ್ ಪ್ರೀಮಿಯಂಗಿರುವ ಜಿಎಸ್‌ಟಿ ದರವನ್ನು ಹಿಂತೆಗೆಯಲು ಸಂಸದರಿಗೆ ಮನವಿ

ಕಾಸರಗೋಡು: ಲೈಫ್ ಇನ್ಶೂರೆನ್ಸ್ ಪ್ರೀಮಿಯಂ, ಆರೋಗ್ಯ ವಿಮೆ ಪ್ರೀಮಿಯಂ ಮೇಲಿನ ಜಿಎಸ್‌ಟಿಯನ್ನು ಕೇಂದ್ರ ಸರಕಾರ ಹಿಂತೆಗೆಯಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಇನ್ಶೂರೆನ್ಸ್ ಎಂಪ್ಲೋಯೀಸ್ ಅಸೋಸಿಯೇಶನ್ ಕಲ್ಲಿಕೋಟೆ ಡಿವಿಶನಲ್ ಘಟಕ ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರಿಗೆ ಮನವಿ ನೀಡಿದೆ. ಲೈಫ್ ಇನ್ಶೂರೆನ್ಸ್, ಮೆಡಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಈಗ 18 ಶೇಕಡಾ ಜಿಎಸ್‌ಟಿ ದರವಿದೆ. ಆರೋಗ್ಯ ವಿಮೆ ಪಾಲಿಸಿಗಳ ಸಂರಕ್ಷಣೆಯನ್ನು ಖಚಿತಪಡಿಸಲು ಯತ್ನಿಸುವಾಗ ಜಿಎಸ್‌ಟಿ ಹೇರಿಕೊಂಡು ಸರಕಾರ ಜನರ ಮೇಲೆ ಹೆಚ್ಚಿನ ಹೊರೆಯನ್ನು ಹೊರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಎಸ್‌ಟಿಯನ್ನು ಹಿಂತೆಗೆಯಬೇಕೆಂದು ಆಗ್ರಹಿಸಿ ಸಂಸದರಿಗೆ ಮನವಿ ನೀಡಲಾಗಿದೆ.

RELATED NEWS

You cannot copy contents of this page