ಇಪಿಎಫ್-ಇಎಸ್‌ಐ ಯೋಜನೆಗಳ ಲೋಪದೋಷ ಪರಿಹರಿಸಲು ಆಗ್ರಹಿಸಿ ಬಿಎಂಎಸ್ ರಾಷ್ಟ್ರೀಯ ಆಂದೋಲನ
ಕಾಸರಗೋಡು: ಕಾರ್ಮಿಕರ ಇಪಿಎಫ್, ಇಎಸ್‌ಐ ಎಂಬೀ ಸಾಮಾಜಿಕ ಸುರಕ್ಷಾ ಯೋಜನೆಯ ಲೋಪದೋಷಗಳನ್ನು ಪರಿಹರಿಸಬೇ ಕೆಂದು ಆಗ್ರಹಿಸಿ ಬಿಎಂಎಸ್ ಆಂದೋಲನಕ್ಕಿಳಿಯುತ್ತಿದೆ. ಇದರ ಪೂರ್ವಭಾವಿಯಾಗಿ ಅಕ್ಟೋಬರ್ ೧ರಂದು ರಾಜ್‌ಭವನ್ ಮಾರ್ಚ್ ನಡೆಯಲಿದೆ. ಬಳಿಕ ರಾಜ್ಯಪಾಲರಿಗೆ ಮನವಿ ನೀಡಲಾಗುವುದು. ಈ ಮಾರ್ಚ್‌ನ ಪ್ರಚಾರಾರ್ಥ ಬಿಎಂಎಸ್ ಜಿಲ್ಲಾ ಸಮಿತಿ ನಡೆಸಿದ ವಾಹನ ಪ್ರಚಾರ ಜಾಥಾ ಕುಂಬಳೆಯಲ್ಲಿ ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ವಿ.ವಿ. ಬಾಲಕೃಷ್ಣನ್ ಉದ್ಘಾಟಿಸಿದರು. ಸೀತಾಂಗೋಳಿ, ಬದಿಯಡ್ಕ, ಕಾಸರಗೋಡು, ಪೊಯಿನಾಚಿ, ಮಾವುಂಗಲ್ ಎಂಬೆಡೆಗಳಲ್ಲಿ ಪ್ರಚಾರ ನಡೆಸಿದ ಬಳಿಕ ಕಾಞಂಗಾಡ್‌ನಲ್ಲಿ ಸಮಾಪ್ತಿಗೊಂಡಿತು. ದಿನೇಶ್ ಬಂಬ್ರಾಣ ಅಧ್ಯಕ್ಷತೆ ವಹಿಸಿದರು. ವಲಯ ಅಧ್ಯಕ್ಷ ವೇಣುಗೋಪಾಲ್ ಮುಗು, ಜಿಲ್ಲಾ ಪದಾಧಿಕಾರಿಗಳಾದ ಅನಿಲ್ ಬಿ ನಾಯರ್, ಗೀತಾ ಬಾಲಕೃಷ್ಣನ್, ಭರತನ್, ಲೀಲಾಕೃಷ್ಣನ್, ಗುರುದಾಸ್ ಮಧೂರು, ಸುರೇಶ್ ದೇಳಿ, ಟಿ. ಕೃಷ್ಣನ್, ಐತ್ತಪ್ಪ ನಾರಾಯಣಮಂಗಲ ಮಾತನಾಡಿದರು.
ಇಪಿಎಫ್ ಪಿಂಚಣಿ ೧೦೦೦ ರೂ.ನಿಂದ ೫೦೦೦ ರೂ.ಗೆ ಹೆಚ್ಚಿಸ ಬೇಕು. ಇಪಿಎಫ್ ಪಿಂಚಣಿಯೊಂ ದಿಗೆ ಡಿಎ ಲಿಂಕ್ ಮಾಡಬೇಕು, ಇಪಿಎಫ್ ಪಿಂಚಣಿದಾರರನ್ನು ಆಯುಷ್ಮಾನ್ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಿ ೫ ಲಕ್ಷ ರೂ. ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕು, ಇಪಿಎಫ್ ವೇತನ ಮಿತಿಯನ್ನು ೩೦ ಸಾವಿರ ರೂ.ಗೇರಿಸುವುದು, ಇಎಸ್‌ಐ ಆಸ್ಪತ್ರೆಗಳ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ ಕೊನೆಗೊಳಿಸ ಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿ ರಾಜ್‌ಭವನ್ ಮಾರ್ಚ್ ನಡೆಯಲಿದೆ.