ಇಲಿವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಗೃಹಿಣಿ ನಿಧನ
ಕಾಸರಗೋ ಡು: ಇಲಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಗೃಹಿಣಿ ಮೃತಪಟ್ಟರು. ಕಳ್ಳಾರು ಮುಂ ಡೋಟ್ ನಿವಾಸಿ ಮ್ಯಾಥ್ಯುರವರ ಪತ್ನಿ ಲಿಲ್ಲಿ ಮ್ಯಾಥ್ಯು (65) ಮೃತಪಟ್ಟವರು. ಬಿಳಿ ಕಲೆ ಶರೀರದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಮಾನಸಿಕ ವಾಗಿ ನೊಂದಿದ್ದರೆನ್ನಲಾಗಿದೆ. ಈ ತಿಂಗಳ ೨೧ರಂದು ಮನೆಯಲ್ಲಿ ಅಸ್ವಸ್ಥರಾಗಿದ್ದರೆ ನ್ನಲಾಗಿದೆ. ಬಳಿಕ ಕಣ್ಣೂರು ಸರಕಾರ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಮೃತರು ಪತಿ, ಮಕ್ಕಳಾದ ಸಿಜಿ ಮ್ಯಾಥ್ಯು, ಮನೋಜ್ ಮ್ಯಾಥ್ಯು, ಶಿಜಿಲ್, ಸೊಸೆಯಂದಿರಾದ ಸಿನಿ, ಸೌಮ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ಚಾಕೋ ಈ ಹಿಂದೆ ನಿಧನಹೊಂ ದಿದ್ದಾರೆ.