ಉಂರ ನಿರ್ವಹಿಸಿ ಹಿಂತಿರುಗುತ್ತಿದ್ದ ಮೊಗ್ರಾಲ್ ನಿವಾಸಿ ಹೃದಯಾಘಾತದಿಂದ ನಿಧನ
ಕಾಸರಗೋಡು: ಉಂರ ಮುಗಿಸಿ ಹಿಂತಿರುಗುತ್ತಿದ್ದ ಮೊಗ್ರಾಲ್ ನಿವಾಸಿ ಹೃದಯಾಘಾತದಿಂದ ನಿಧನ ಹೊಂದಿದರು. ಮೊಗ್ರಾಲ್ ರಹ್ಮತ್ ನಗರದ ಅಬ್ಬಾಸ್ (74) ಮಕ್ಕಾದಲ್ಲಿ ನಿಧನ ಹೊಂದಿದ್ದಾರೆ. ಇಂದು ಬೆಳಿಗ್ಗೆ ಊರಿಗೆ ಹಿಂತಿರುಗಲಿರುವಂತೆ ಸಾವು ಸಂಭವಿಸಿದೆ. ಎರಡು ವಾರದ ಹಿಂದೆ ಉಪ್ಪಳದ ಒಂದು ಸಂಸ್ಥೆಯ ಮೂಲಕ ಉಂರ ನಿರ್ವಹಿಸಲು ತೆರಳಿದ್ದರು. ಮೃತರು ಪತ್ನಿ ಉಮ್ಮಾಲಿ, ಮಕ್ಕಳಾದ ಶಾಜು ಮಿಲಾನೊ, ಶಂಸುದ್ದೀನ್, ಸುಮಯ್ಯ, ಅಳಿಯ-ಸೊಸೆಯಂದಿರಾದ ರಫೀಕ್, ಸುಲೈಖ ಬಂಬ್ರಾಣ, ಮಾಲೂಫ ಮುಗುರೋಡ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.