ಉದ್ಯೋಗ ಹೆಸರಲ್ಲಿ ವಂಚನೆ: ಸಚಿತಾ ರೈ ವಿರುದ್ಧ ಮತ್ತೊಂದು ಕೇಸು

ಕಾಸರಗೋಡು: ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸುವು ದಾಗಿ ಭರವಸೆಯೊಡ್ಡಿ ಹಣ ಪಡೆದು ಹಲವರಿಗೆ ವಂಚಿಸಿದ ಡಿವೈಎಫ್‌ಐ ಮಾಜಿ ನೇತಾರೆ, ಶೇಣಿ ಬಲ್ತಕಲ್ಲುವಿನ ಸಚಿತಾ ರೈ (27) ವಿರುದ್ಧ ಇನ್ನೋರ್ವೆ ಯುವತಿ ದೂರು ನೀಡಿದ್ದಾರೆ.  ಮೊಗ್ರಾಲ್ ಪುತ್ತೂರು ಕಡವತ್‌ನ ನಫೀಸತ್ ಶಿಫಾಬ ನೀಡಿದ ದೂರಿ ನಂತೆ ಕಾಸರಗೋಡು ನಗರಠಾಣೆ ಪೊಲೀಸರು ಸಚಿತಾ ರೈ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ಸಚಿತಾ ರೈ ಹಾಗೂ ದೂರು ಗಾರ್ತಿ ಸಹಪಾಠಿಯಾಗಿದ್ದಾರೆ. ಸಿಪಿಸಿ ಆರ್‌ಐಯಲ್ಲಿ ಉದ್ಯೋಗ ಭರವಸೆ ಯೊಡ್ಡಿ 1.40  ಲಕ್ಷ ರೂಪಾಯಿ ಪಡೆದು ಸಚಿತಾ ರೈ ವಂಚಿಸಿದ್ದಾಳೆಂದು ಶಿಫಾಬ ದೂರಿನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಸಚಿತಾ ರೈ ವಿರುದ್ಧ ವಿವಿಧ ಠಾಣೆಗಳಲ್ಲಾಗಿ  ದಾಖಲಿಸಿ ಕೊಂಡ ಪ್ರಕರಣಗಳ ಸಂಖ್ಯೆ 16ಕ್ಕೇರಿದೆ.ವಂಚನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ದಾಖಲಿಸಿ ಕೊಂಡ ಪ್ರಕರಣದಲ್ಲಿ ಸೆರೆಗೀಡಾದ ಸಚಿತಾ ರೈ ಈಗ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದಾಳೆ.

RELATED NEWS

You cannot copy contents of this page